ಉಪ್ಪಳ: ಪೊಸಡಿಗುಂಪೆ ಪರಿಸರದಲ್ಲಿ ಇಂದು ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದೆ. ವಿಷಯ ತಿಳಿದು ಉಪ್ಪಳದಿಂದ ತಲುಪಿದ ಅಗ್ನಿಶಾಮಕದಳ ಬೆಂಕಿ ನಂದಿಸಿದೆ. ದಿನಂಪ್ರತಿ ನೂರಾರು ಮಂದಿ ಭೇಟಿ ನೀಡುವ ಪ್ರವಾಸಿ ಕೇಂದ್ರವಾದ ಪೊಸಡಿಗುಂಪೆ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇಲ್ಲಿಗೆ ತಲುಪುವವರು ಬೀಡಿ, ಸಿಗರೇಟ್ ಸೇದಿ ಅದನ್ನು ನಂದಿಸದೆ ಎಸೆಯುತ್ತಿ ರುವುದೇ ಬೆಂಕಿ ಹತ್ತಿಕೊಳ್ಳಲು ಕಾರಣವಾಗಿದೆಯೆಂದು ಹೇ ಲಾಗುತ್ತಿದೆ.






