ಕಾಸರಗೋಡು: ಸಿಪಿಎಂ ಮುಖಂಡ ಕಾಟುಕುಕ್ಕೆಯ ಸುಧಾಕರನನ್ನು ಪಕ್ಷದಿಂದ ಅಮಾನತು ಮಾಡಲಾ ಗಿದೆ. ಲೈಂಗಿಕ ಆರೋಪಕ್ಕೆ ಸಂಬಂ ಧಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಆರೋಪದ ಬಗ್ಗೆ ತನಿಖೆ ನಡೆಸಲು ಈ ವ್ಯಕ್ತಿ ಒಳಗೊಂಡ ಕುಂಬಳೆ ಏರಿಯಾ ಸಮಿತಿಯ ಮೂರು ಮಂದಿ ಮುಖಂಡರಿಗೆ ಹೊಣೆ ನೀಡ ಲಾಗಿದೆ. ಕುಂಬಳೆ ಇಚ್ಲಂಗೋಡು ಎಲ್ಪಿ ಶಾಲೆಯ ಅಧ್ಯಾಪಕನಾಗಿ ರುವ ಸುಧಾಕರ ಎಣ್ಮಕಜೆ ಪಂಚಾಯತ್ನ ಬಾಳೆಮೂಲೆ ೩ನೇ ವಾರ್ಡ್ ಸದಸ್ಯನಾಗಿದ್ದು, ಸಿಪಿಎಂ ಕುಂಬಳೆ ಏರಿಯಾ ಕಾರ್ಯದರ್ಶಿಯಾ ಗಿದ್ದನು. 1995ರಿಂದ ಜಿಲ್ಲೆಯ ನಿವಾಸಿ ಯಾದ ಓರ್ವೆ ಮಹಿಳೆಗೆ ನಿರಂತರ ಲೈಂಗಿಕ ಕಿರುಕುಳ ನೀಡಿರುವುದಾ ಗಿಯೂ ಈಗಲೂ ಅದನ್ನು ಮುಂದುವರಿಸುತ್ತಿದ್ದು, ಪತಿ ಹಾಗೂ ಮಕ್ಕಳು ಒಳಗೊಂಡ ಕುಟುಂಬದ ವಿರುದ್ಧ ಸುಧಾಕರ ಕೊಲೆ ಬೆದರಿಕೆ ಒಡ್ಡಿರುವುದಾಗಿಯೂ ಮಹಿಳೆ ಡಿಜಿಪಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದರು.
2025 ಡಿಸೆಂಬರ್ 31ರಂದು ತಿರುವನಂತಪುರ ಪೊಲೀಸ್ ಹೆಡ್ ಕ್ವಾರ್ಟರ್ಸ್ನ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ದೂರಿನ ಪ್ರತಿಗಳನ್ನು ಜಿಲ್ಲಾ ಪೊಲೀಸ್ ಅಧಿಕಾರಿಗೆ ಕಳುಹಿಸಿಕೊಡಲಾಗಿದೆ. ಆರೋಪಿ ಜೈಲು ಶಿಕ್ಷೆ ಅನುಭವಿಸಿದ ವ್ಯಕ್ತಿಯಾಗಿದ್ದು, ಭೂಗತ ತಂಡ ಈತನ ರಕ್ಷಣೆಗಿದೆ ಎಂದು ಕುಂಬಳೆ ಪೊಲೀಸರು ಮುನ್ನೆಚ್ಚರಿಕೆ ನೀಡಿರುವುದಾಗಿಯೂ ಮಹಿಳೆ ಆರೋಪಿಸಿದ್ದರು. ಈ ಬಗ್ಗೆ ‘ಕಾರವಲ್’ ನಿನ್ನೆ ವರದಿ ಪ್ರಕಟಿಸಿತ್ತು.






