ಕಾಸರಗೋಡು: ಗಲ್ಫ್ ಉದ್ಯೋಗಿ ಯಾದ ಉದುಮ ಬಾರಾದ ಮುರಳಿ ಎಂಬವರ ಮನೆಯಿಂದ ೮ ಪವನ್ ಚಿನ್ನಾಭರಣ ಹಾಗೂ ೫ ಸಾವಿರ ರೂಪಾಯಿ ಕಳವಿಗೀಡಾದ ಬಗ್ಗೆ ವರದಿಯಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮನೆಯ ಮುಂಭಾಗದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕಪಾಟಿ ನಲ್ಲಿದ್ದ ನಗ-ನಗದು ದೋಚಿದ್ದಾರೆ. ಮುರಳಿ ಗಲ್ಫ್‌ನಲ್ಲಿದ್ದಾರೆ. ಮುರಳಿ ಅವರ ಪತ್ನಿ ಹಾಗೂ ಮಕ್ಕಳು ಸಮೀಪದಲ್ಲಿರುವ ಮುರಳಿಯ ತಂದೆಯ ಮನೆಯಲ್ಲಿ ವಾಸಿಸುತ್ತಿದ್ದರು. ಇಂದು ಬೆಳಿಗ್ಗೆ ಅಲ್ಲಿಂದ ಸ್ವಂತ ಮನೆಗೆ ತೆರಳಿದಾಗ ಕಳ್ಳರು ಮನೆಗೆ ನುಗ್ಗಿದ ವಿಷಯ ಅರಿವಿಗೆ ಬಂದಿದೆ. ಈ ಬಗ್ಗೆ ಮೇಲ್ಪರಂಬ ಪೊಲೀಸರಿಗೆ ದೂರು ನೀಡಲಾಗಿದೆ.







