ಎಣ್ಮಕಜೆ: ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಎಣ್ಮಕಜೆ ಪಂಚಾಯತ್ ಸದಸ್ಯ, ಸಿಪಿಎಂ ನೇ ತಾರ ಸುಧಾಕರ ಕೂಡಲೇ ಪಂಚಾ ಯತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ನಿನ್ನೆ ಸಂಜೆ ಬಾಳೆಮೂಲೆ ಬಿಜೆಪಿ ವಾರ್ಡ್ ಸಮಿತಿಯ ವತಿಯಿಂದ ಬಾಳೆಮೂಲೆ ಟಿವಿ ಶೆಡ್‌ನಿಂದ ಬಾಳೆಮೂಲೆ ಶಾಲೆಯವರೆಗೆ ಪ್ರತಿಭಟನೆ ಮೆರವಣಿಗೆ ನಡೆಯಿತು. ರಾಜಿನಾಮೆ ನೀಡದಿದ್ದಲ್ಲಿ ಮುಂದಕ್ಕೆ ಸುಧಾಕರ ಪಂಚಾಯತ್ ಪ್ರವೇಶಿಸುವುದಕ್ಕೆ ತಡೆ ಮಾಡಿ ಕಪ್ಪು ಬಾವುಟ ಪ್ರದರ್ಶನ ಮಾಡಿ ಉಗ್ರ ಪ್ರತಿರೋಧಕ್ಕೆ ಬಿಜೆಪಿ ಸನ್ನದ್ಧವಾಗಿದೆ ಎಂಬ ಎಚ್ಚರಿಕೆ ನೀಡಲಾಯಿತು. ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮುರಳೀಧರ್ ಯಾದವ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಕೆ.ಪಿ ಅನಿಲ್ ಕುಮಾರ್, ಮಂಡಲ ಜತೆಕಾರ್ಯದರ್ಶಿ ಸುಮಿತ್ ರಾಜ್, ಪಂಚಾಯತ್ ಸಮಿತಿ ಅಧ್ಯಕ್ಷ ರಮಾನಂದ ಭಟ್ ಎಡಮಲೆ, ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಭಟ್ ಪತ್ತಡ್ಕ, ಹಿಂದೂ ಸಂಘಟನೆಯ ಮುಖಂಡ ಅಕ್ಷಯ್ ರಜಪೂತ್ ಕಲ್ಲಡ್ಕ, ವಾರ್ಡ್ ಸಮಿತಿ ಅಧ್ಯಕ್ಷ ಹಾಗೂ ಕಾರ್ಯಕರ್ತರು ಭಾಗವಹಿಸಿದರು.





