ಮಂಜೇಶ್ವರ: ಮೀಂಜ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಸ್ಥಾನದ ಹೆಸರಲ್ಲಿ ಉಂಟಾದ ತರ್ಕ ನಿನ್ನೆ ಬೆಳಿಗ್ಗೆ ಮೀಂಜ ಪಂಚಾಯತ್ ಲೀಗ್ ಕಚೇರಿಯಲ್ಲಿ ಹೊಡೆದಾಟದೊಂದಿಗೆ ಕೊನೆಗೊಂಡಿತು. ಲೀಗ್ ಕಚೇರಿಯಲ್ಲಿದ್ದ ಓರ್ವೆ ಸದಸ್ಯೆಗೂ ಹಲ್ಲೆಗೈದಿರುವುದಾಗಿ ಆರೋಪವುಂಟಾಗಿದೆ. ಓರ್ವ ಸ್ಥಾಯೀ ಸಮಿತಿಗೆ ಲೀಗ್ ಸದಸ್ಯರಾದ ಸಲೀಂ ಹಾಗೂ ಕೆ.ಸಿದ್ದಿಕ್‌ರ ಹೆಸರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಮಂಡಲ ಸಮಿತಿ ಪಂಚಾಯತ್ ಸಮಿತಿಯೊಂದಿಗೆ ಚರ್ಚೆ ಕೂಡಾ ನಡೆಸದೆ ಅದರಲ್ಲೊಂದು ಹೆಸರನ್ನು ಸೂಚಿಸಿರುವುದಾಗಿ ಹೇಳಲಾಗುತ್ತಿದೆ. ಪಂಚಾಯತ್‌ನಲ್ಲಿ ಆ ಕುರಿತಾಗಿ ಅಸಮಾಧಾನ ವ್ಯಕ್ತವಾಗುವುದರೊಂದಿಗೆ ಜಿಲ್ಲಾ ಸಮಿತಿ ವಿವಾದದಲ್ಲಿ ಮಧ್ಯಪ್ರವೇಶಿಸಿ ಸಲೀಂರನ್ನು ಆ ಸ್ಥಾನಕ್ಕೆ ಸೂಚಿಸಿದೆ. ನಿನ್ನೆ ಸ್ಥಾಯಿ ಸಮಿತಿ ಚುನಾವಣೆ ನಡೆಯುವುದರ ಪೂರ್ವಭಾವಿಯಾಗಿ ಪಂಚಾಯತ್ ಸದಸ್ಯರು ಹಾಗೂ ಕಾರ್ಯಕರ್ತರು ಲೀಗ್ ಪಂಚಾಯತ್ ಸಮಿತಿ ಕಚೇರಿಗೆ ತಲುಪುತ್ತಿದ್ದಂತೆ ರೋಷಗೊಂಡ ಒಂದು ತಂಡದ ಕಾರ್ಯಕರ್ತರು ಕಚೇರಿಗೆ ನುಗ್ಗಿ ನಿರ್ಧಾರವನ್ನು ವಿರೋಧಿಸಿರುವುದಾಗಿ ಹೇಳಲಾಗುತ್ತಿದೆ. ಪಂಚಾಯತ್‌ಗೆ ಸಂಬಂಧಿಸಿದ ಪಕ್ಷದ ವಿಷಯಗಳನ್ನು ನಿಧರಿಸುವುದು ಪಕ್ಷದ ಕಾರ್ಯಕ ರ್ತರೊಂದಿಗೆ ಸಮಾಲೋಚಿಸಿ ಆಗಿರಬೇಕೆಂದು ತಿಳಿಸಿ ಆರಂಭಗೊಂಡ ತರ್ಕ ವಾಗ್ವಾದ ಬಳಿಕ ನೂಕುನುಗ್ಗಲಿನಲ್ಲಿ ಕೊನೆಗೊಂಡಿದೆ. ಪಂಚಾಯತ್ ಅಧ್ಯಕ್ಷ ಸ್ಥಾನದ ಹೆಸರಲ್ಲೂ ತರ್ಕ ಉಂಟಾಗಿತ್ತು. ಇದೇ ವೇಳೆ ಗದ್ದಲ ಸೃಷ್ಟಿಸಿದವರು ಕರಿ ಆಯಿಲ್ ಕೈವಶವಿರಿಸಿಕೊಂಡಿರುವುದಾಗಿಯೂ ಮತ್ತೊಂದು ವಿಭಾಗ ಆರೋಪಿಸಿದೆ.






