ಕುಂಬಳೆ: ರೀಲ್ಸ್ ಚಿತ್ರೀಕರಣ ವೇಳೆ ಉಂಟಾದ ಲೋಪದಿಂದ ಮನನೊಂದು ಯುವಕ ಬೆಡ್‌ರೂಂ ನಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ಕುಂಬಳೆ ಆರಿಕ್ಕಾಡಿ ಒಡ್ಡು ಮೈದಾನ ಸಮೀಪದ ಬಾಬು ಎಂಬವರ ಪುತ್ರ ಸಂತೋಷ್ (30) ಮೃತಪಟ್ಟ ಯುವಕ. ನಿನ್ನೆ ರಾತ್ರಿ 11 ಗಂಟೆ ವೇಳೆ ಘಟನೆ ನಡೆದಿದೆ. ಸಂತೋಷ್ ರೀಲ್ಸ್ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚುತ್ತಿದ್ದುದಾಗಿ ಸಂಬಂಧಿಕರು ತಿಳಿಸಿದ್ದಾರೆ. ನಿನ್ನೆ ಥರ್ಮೋಕೋಲ್‌ಗೆ ಸಂಬಂಧಪಟ್ಟ ರೀಲ್ಸ್ ಚಿತ್ರೀಕರಿಸಿರುವು ದಾಗಿ ಹೇಳಲಾಗುತ್ತಿದೆ. ಈ ಮಧ್ಯೆ ಥರ್ಮೋಕೋಲ್ ಪುಡಿಯಾಗಿದ್ದು ಇದರ ವೀಡಿಯೋವನ್ನು ಸ್ನೇಹಿತನಿಗೆ ಕಳುಹಿಸಿಕೊಟ್ಟು ಈ ವೇಳೆ ಉಂಟಾದ ಲೋಪವನ್ನು ತಿಳಿಸಿದ್ದರೆನ್ನಲಾಗಿದೆ. ಅದರ ಬೆನ್ನಲ್ಲೇ ಸ್ನೇಹಿತ ಸಂತೋಷ್‌ಗೆ ಫೋನ್ ಕರೆ ಮಾಡಿದರೂ ಪ್ರತಿಕ್ರಿಯಿಸಲಿಲ್ಲ. ಈ ವಿಷಯವನ್ನು ಸ್ನೇಹಿತ ಮನೆಯವರಿಗೆ ಫೋನ್ ಕರೆ ಮಾಡಿ ತಿಳಿಸಿದ್ದನು. ಇದರಿಂದ ಸಂತೋಷ್ ನಿದ್ರಿಸಿದ್ದ ಬೆಡ್‌ರೂಂನೊಳಗೆ ಮನೆಯವರು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಸಂತೋಷ್ ಪತ್ತೆಯಾಗಿದ್ದರು. ಕೂಡಲೇ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲವೆಂದು ಸಂಬಂಧಿಕರು ತಿಳಿಸಿದ್ದಾರೆ.
ಮೃತರು ತಂದೆ, ತಾಯಿ ಸುಮತಿ, ಸಹೋದರಿ ಭವ್ಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.





