ಕುಂಬಳೆ: ಕುಂಬಳೆ ಪಂಚಾಯತ್‌ನ ನೂತನ ಆಡಳಿತ ಸಮಿತಿಯ ಚಟುವಟಿಕೆಗಳು ಇಂದು ಬೆಳಿಗ್ಗೆ ಕುಂಬಳೆ ಪೇಟೆಯನ್ನು ಶುಚೀ ಕರಿಸುವ ಮೂಲಕ ಆರಂಭಿಸಲಾಯಿತು. ಪಂ. ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್ ಹಾಜಿ, ಉಪಾಧ್ಯಕ್ಷ ಬಲ್ಕೀಸ್ ಎಂ, ಸದಸ್ಯರಾದ ಎಂ.ಪಿ. ಖಾಲಿದ್, ಇನಾಸ್, ರಮೇಶ್ ಭಟ್, ಕಾಂಚಾರ, ಮಂಜುನಾಥ ಆಳ್ವ, ಅಮಿತ, ಶಾರದ, ಹಮೀದ್ ಕೊಯಿಪ್ಪಾಡಿ ಮೊದಲಾದವರು ಪಾಲ್ಗೊಂಡರು. ಪಂ. ಸಿಬ್ಬಂದಿಗಳು, ಉದ್ಯೋಗ ಖಾತರಿ ಕಾರ್ಮಿಕರು, ಹಸಿರು ಕ್ರಿಯಾ ಸೇನೆ ಸದಸ್ಯೆಯರು, ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ, ವ್ಯಾಪಾರಿ ವ್ಯವ ಸಾಯಿ ಸಮಿತಿ ಸದಸ್ಯರು ಸಹಕರಿಸಿದರು.





