ಕಾಸರಗೋಡು: ಮಾವುಂಗಾಲ್‌ನಲ್ಲಿ ಆಸ್ಪತ್ರೆ ಮುಂಭಾಗದಲ್ಲಿ ನಿಲ್ಲಿಸಿದ್ದ ಆಟೋರಿಕ್ಷಾದಿಂದ 7 ಪವನ್ ಚಿನ್ನಾಭರಣ ಕಳವುಗೈದ ಪ್ರಕರಣದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಕಳ್ಳಾರ್ ಒಕ್ಲಾವ್ ನಿವಾಸಿ ಸುಬೈರ್ (23), ಕಾಞಂಗಾಡ್ ವಡಗರಮುಖ್‌ನ ಆಶಿಕ್ (28) ಎಂಬಿವರನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ವೆಳ್ಳರಿಕುಂಡ್ ಕಲ್ಲಂಜಿರ ನಿವಾಸಿ ಅಶ್ರಫ್‌ರ ಆಟೋ ರಿಕ್ಷಾದಿಂದ ಚಿನ್ನಾಭರಣವನ್ನು ಆರೋಪಿಗಳು ಕಳವುಗೈದಿದ್ದರೆನ್ನಲಾಗಿದೆ.







