ಮಂಜೇಶ್ವರ: ವರ್ಕಾಡಿ ಪಂಚಾ ಯತ್ ವ್ಯಾಪ್ತಿಯ ಕೊಡ್ಲಮೊಗರು ಸುಳ್ಯಮೆ ಎಂಬಲ್ಲಿ ಶೆಡ್ಡ್ವೊಂದರಿAದ 116 ಕಿಲೋ 200 ಗ್ರಾಂ ಗಾಂಜಾ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬAಧಿಸಿ ಮತ್ತೋರ್ವನನ್ನು ಮಂ ಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಹೊಸಬೆಟ್ಟು ಕಡಪುö್ಪರದ ಅಬೂಬಕ್ಕರ್ ಸಿದ್ದಿಕ್ ಯಾನೆ ಕಡಪುö್ಪರ ಹಾರೀಸ್ (36) ಬಂಧಿತ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಎರಡು ವಾರಗಳ ರಿಮಾಂಡ್ ವಿಧಿಸಲÁಗಿದೆ. ಕಾಸರಗೋಡು ಎ.ಎಸ್.ಪಿ ನಂದಗೋಪನ್ರ ಸೂಚನೆಯಂತೆ ಮಂಜೇಶ್ವರ ಠಾಣೆಯ ಇನ್ಸ್ಫೆಕ್ಟರ್ ಅಜಿತ್ ಕುಮಾರ್.ಪಿ ಮತ್ತು ತಂಡ ಆರೋಪಿಯನ್ನು ಬಂದಿsಸಿದೆ. 2025 ಅಕ್ಟೋಬರ್ 8ರಂದು ಮುಂಜಾನೆ ಸುಮಾರು 1ಗಂಟೆ ವೇಳೆ ಸುಳ್ಯಮೆ ಎಂಬಲ್ಲಿ ಶೆಡ್ಡ್ನಲ್ಲಿ ನಾಲ್ಕು ಗೋಣಿ ಚೀಲಗಳಲ್ಲಿ ಸಂಗ್ರಹಿಸಿಡಲಾಗಿದ್ದ 116 ಕಿಲೋ ಗಾಂಜÁವನ್ನು ಅಂದಿನ ಮಂಜೇಶ್ವರ ಠಾಣೆಯಲ್ಲಿ ಇನ್ಸ್ಫೆಕ್ಟರ್ ಆಗಿದ್ದ ಇ.ಅನೂಪ್ಕುಮಾರ್ ಮತ್ತು ತಂಡ ವಶಪಡಿಸಿಕೊಂಡಿದೆ. ಗಾಂಜಾ ಸಾಗಿಸಲು ಬಳಸಲಾಗಿದೆ ಎಂದು ಅಂದಾಜಿಸಲಾದ ಮಿನಿ ಲಾರಿಯನ್ನು ಕೂಡ ಅದೇ ವೇಳೆ ವಶಪಡಿಸಿಕೊಂ ಡಿದ್ದತ್ತು. ಬಳಿಕ ನಡೆಸಿದ ತನಿಖೆಯಲ್ಲಿ ಪೊಲೀಸರು ವಿವಿಧ ಸಮಯದಲ್ಲಿ ನಾಲ್ವರನ್ನು ಬಂದಿsಸಿದ್ದರು. ಅಬೂ ಬಕ್ಕರ್ ಸಿದ್ದಿಕ್ ಬಂಧನದೊAದಿಗೆ ಸುಳ್ಯಮೆ ಗಾಂಜಾ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಐದಕ್ಕೇರಿದೆ.







