ಬೇಲಿ ನಿರ್ಮಿಸಲು ಸ್ಥಾಪಿಸಿದ್ದ ಕಬ್ಬಿಣದ ಕಂಬಗಳು ಕುಸಿತ: ತಪ್ಪಿದ ಅಪಾಯ

ಮೊಗ್ರಾಲ್ ಪುತ್ತೂರು: ಮೊಗ್ರಾಲ್ ಪುತ್ತೂರು ಶಾಲಾ ಮೈದಾನದಲ್ಲಿ  ಶಾಲಾ ಗ್ರೌಂಡ್ ಇಂಪ್ರೂವ್‌ಮೆಂಟ್ ಯೋಜನೆ ಪ್ರಕಾರ  ಜಿಲ್ಲಾ ಪಂಚಾಯತ್ ಕಳೆದ ವರ್ಷ ಶಾಲಾ ಆವರಣಗೋಡೆಗೆ ಸೇರಿಕೊಂಡು  ವಾಲ್ ಸೇಫ್ಟಿ ನೆಟ್ ಹಾಕಲು ಸ್ಥಾಪಿಸಿದ ಕಬ್ಬಿಣದಬೇಲಿ  ಗಾಳಿಗೆ ಕುಸಿದಿದೆ. ಶಾಲೆಗೆ ರಜೆಯಾದ ಕಾರಣ ದೊಡ್ಡ ಮಟ್ಟಿನ ದುರಂತ ತಪ್ಪಿದೆ. 200 ಮೀಟರ್ ಉದ್ದದಲ್ಲೂ, 100 ಮೀಟರ್ ಎತ್ತರದಲ್ಲೂ  ಕಬ್ಬಿಣದ ಬೇಲಿ ಸ್ಥಾಪಿಸಲಾಗಿತ್ತು.  ಫುಟ್ಭಾಲ್ ಆಟದ ಮಧ್ಯೆ ಚೆಂಡು ಮೈದಾನದಿಂದ ಹೊರಗೆ ಹೋಗದಿರಲು ಬಲೆ ಸ್ಥಾಪಿಸಲು ಕಬ್ಬಿಣದ ಕಂಬಗಳನ್ನು ಸ್ಥಾಪಿಸಿ ಬೇಲಿ ಹಾಕಲಾಗಿತ್ತು.  ಇದು ಮೈದಾನದೊಳಗೆ ಕುಸಿದು ಬಿದ್ದ ಕಾರಣ ಶಾಲೆಯ ರಸ್ತೆಯಲ್ಲಿ ನಡೆದುಕೊಂಡು ಹೋಗುವವರು, ವಾಹನಗಳಿಗೆ  ಅಪಾಯ ಉಂಟಾಗಲಿಲ್ಲ.

ಕಾಸರಗೋಡು ಜಿಲ್ಲಾ ಪಂಚಾಯತ್ ಕಳೆದ ವರ್ಷ 10 ಲ ಲಕ್ಷ ರೂ. ವೆಚ್ಚದಲ್ಲಿ ಶಾಲೆಗೆ ಆವರಣಗೋಡೆ, ಪ್ರವೇಶದ್ವಾರ ಎಂಬಿವುಗಳ ನಿರ್ಮಾಣ ಸಮಾರಂಭದಲ್ಲಿ  ಬಾಲ್ ಸೇಫ್ಟಿ ನೆಟ್ ಸ್ಥಾಪಿಸಲು ಕಬ್ಬಿಣದ ಬೇಲಿ ಹಾಕಲಾಗಿತ್ತು. ಆದರೆ ಕಂಬಗಳಲ್ಲಿ ಇದುವರೆಗೂ ಬಲೆ ಸ್ಥಾಪಿಸಲಾಗಿತ್ತು. ಆದುದರಿಂದ ಕಂದಾಯ ಜಿಲ್ಲಾ ಶಾಲಾ ಕಲೋತ್ಸವದಂಗವಾಗಿ  ಕಬ್ಬಿಣದ  ಕಂಬಗಳಲ್ಲಿ ತುಂಬಾ ಫ್ಲೆಕ್ಸ್ ಬೋರ್ಡ್‌ಗಳನ್ನು ಸ್ಥಾಪಿಸಲಾಗಿತ್ತು. ಇದೆಲ್ಲವೂ ಸೇರಿ ಕುಸಿದು ಬಿದ್ದಿದೆ. ಹೈಸ್ಕೂಲ್ ವಿಭಾಗ ವಿದ್ಯಾರ್ಥಿಗಳಿಗೆ ತರಗತಿ ನಡೆಯುತ್ತಿದ್ದ ಸಮಯದಲ್ಲಿ  ಕಂಬ ಕುಸಿದುಬಿದ್ದಿದೆ. ಇಲ್ಲಿ ಸ್ಥಾಪಿಸಿದ ಕಬ್ಬಿಣದ ಕಂಬಗಳು ಕಳಪೆ ಮಟ್ಟದ್ದೆಂದು ಈ ಮೊದಲೇ ಆರೋಪ ಕೇಳಿಬಂದಿತ್ತು. ಆದುದರಿಂದ ಇದಕ್ಕೆ ಬಲೆಯನ್ನು ಇದುವರೆಗೂ ಸ್ಥಾಪಿಸಿರಲಿಲ್ಲ.ಸರಿಯಾದ ರೀತಿಯಲ್ಲಿ ಕಬ್ಬಿಣದ ಕಂಬ, ಬಲೆಯನ್ನು ಸ್ಥಾಪಿಸಲು ತುರ್ತು ಕ್ರಮ ಉಂಟಾಗಬೇಕೆಂದು ಈಗ ಸ್ಥಳೀಯರು ಆಗ್ರಹಿಸಿದ್ದಾರೆ.

RELATED NEWS

You cannot copy contents of this page