ಬಿಜೆಪಿ ಮಾಜಿ ರಾಜ್ಯ ಕೌನ್ಸಿಲ್ ಸದಸ್ಯ ಕೆ. ಮಾಧವನ್ ನಾಯರ್ ನಿಧನ

ಕಾಸರಗೋಡು: ಬಿಜೆಪಿ ಮಾಜಿ ರಾಜ್ಯ ಕೌನ್ಸಿಲ್ ಸದಸ್ಯ, ನಿವೃತ್ತ ಪಂಚಾಯತ್ ಎಕ್ಸಿಕ್ಯೂಟಿವ್ ಆಫೀಸರ್ ಆಗಿದ್ದ ಪರವನಡ್ಕದ ಕೆ. ಮಾಧವನ್ ನಾಯರ್ (88) ನಿಧನ ಹೊಂದಿದರು. ಚೆಮ್ನಾಡ್ ಪಂಚಾಯತ್‌ನಲ್ಲಿ ಇವರು ನಾಲ್ಕು ಬಾರಿ ಸದಸ್ಯನಾಗಿದ್ದರು. ಪರವನಡ್ಕ ದೀನ್ ದಯಾಳ್ ಉಪಾಧ್ಯಾಯ ಸ್ಮಾರಕ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷರಾಗಿದ್ದರು. ಕೋಟರುವಂ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷರಾಗಿ ಕಾರ್ಯಾಚರಿಸಿದ್ದಾರೆ. ಎಕ್ಸಿಕ್ಯೂಟಿವ್ ಮಾಧವನ್ ನಾಯರ್ ಎಂದೇ ತಿಳಿಯಲ್ಪಡುತ್ತಿದ್ದ ಇವರು ಪರವನಡ್ಕ ಹಾಗೂ ಪರಿಸರ ಪ್ರದೇಶಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಟುವಟಿಕೆ ಆರಂಭಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ದಿವಂಗತ ತಾಯನ್ನೂರು ಮೇಲತ್ ಕುಂಞಿರಾಮನ್ ನಾಯರ್-ಕೂಕಲ್ ಪೊನ್ನಮ್ಮ ಅಮ್ಮ ದಂಪತಿಯ ಪುತ್ರನಾದ ಇವರು ಅವಿವಾಹಿತನಾಗಿದ್ದಾರೆ. ನಿಧನಕ್ಕೆ ಬಿಜೆಪಿ ಕಲ್ಲಿಕೋಟೆ ವಲಯ ಅಧ್ಯಕ್ಷ ಕೆ. ಶ್ರೀಕಾಂತ್ ಸಂತಾಪ ಸೂಚಿಸಿದ್ದಾರೆ.

You cannot copy contents of this page