ಕಾಸರಗೋಡು: ಆಹಾರ ಅನ್ನನಾಳದಲ್ಲಿ ಸಿಲುಕಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವತಿ ಮೃತಪಟ್ಟಳು. ಭೀಮನಡಿ ಒರಿತ್ತಾಯಿಲ್ನ ಜೈಮೋನ್ ಜೋಸ್ ಎಂಬವರ ಪುತ್ರಿ ಆಗ್ನಸ್ ಜೈಮೋನ್ (21) ಮೃತಪಟ್ಟ ಯುವತಿ. ಈ ತಿಂಗಳ ೬ರಂದು ರಾತ್ರಿ ಆಹಾರ ಸೇವಿಸುತ್ತಿದ್ದಾಗ ಅನ್ನನಾಳದಲ್ಲಿ ಸಿಲುಕಿತ್ತೆನ್ನಲಾಗಿದೆ. ಇದರಿಂದ ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಯುವತಿ ನಿನ್ನೆ ಮೃತಪಟ್ಟಳು.






