ಪೈವಳಿಕೆ: ಪಂಚಾಯತ್ನಲ್ಲಿ ಮುಸ್ಲಿಂಲೀಗ್ ಸದಸ್ಯೆಯ ಬೆಂಬಲದೊಂದಿಗೆ ಬಿಜೆಪಿ ಜಯಗಳಿಸಿದೆ. ಸ್ಥಾಯಿ ಸಮಿತಿ ಅಧ್ಯಕ್ಷ ಚುನಾವಣೆಯಲ್ಲಿ ಮುಸ್ಲಿಂ ಲೀಗ್ ಸದಸ್ಯೆ ಬಿಜೆಪಿಗೆ ಮತ ನೀಡಿದರು. ಲೀಗ್ನ ಮತ ಲಭಿಸಿದ ಹಿನ್ನೆಲೆಯಲ್ಲಿ ಆರೋಗ್ಯ- ಶಿಕ್ಷಣ ಸ್ಥಾಯಿ ಸಮಿತಿಯ ಚೆಯರ್ ಪರ್ಸನ್ ಆಗಿ ಬಿಜೆಪಿಯ ಸುಮನ ಜಿ. ಭಟ್ ಆಯ್ಕೆಯಾದರು. ಸಿಪಿಎಂನ ದಿನೇಶ್ವರಿ ನಾಗೇಶ್ರನ್ನು ಸುಮನ ಜಿ. ಭಟ್ ಸೋಲಿಸಿದ್ದಾರೆ. ಮುಸ್ಲಿಂ ಲೀಗ್ನ ಸದಸ್ಯೆ ಮೈಮೂನತುಲ್ ಮಿಸ್ರಿಯ ಬಿಜೆಪಿ ಸದಸ್ಯೆ ಸುಮನ ಜಿ. ಭಟ್ಗೆ ಮತ ನೀಡಿದ್ದಾರೆ. ಇದರಿಂದ ಸುಮನ ಭಟ್ 3 ಮತ ಹಾಗೂ ದಿನೇಶ್ವರಿ ನಾಗೇಶ್ 2 ಮತ ಗಳಿಸಿದ್ದಾರೆ. ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಯಲ್ಲಿ ಈ ಮೊದಲು 4 ಐಕ್ಯರಂಗದ ಸದಸ್ಯರು ಬಿಜೆಪಿಗೆ ಮತ ನೀಡಿದ್ದರು. ಪಂಚಾಯತ್ನಲ್ಲಿ ಒಟ್ಟು 21 ವಾರ್ಡ್ಗಳಿದ್ದು, ಇದರಲ್ಲಿ ಐಕ್ಯರಂಗ 9, ಎಡರಂಗ 6, ಬಿಜೆಪಿ 5, ಓರ್ವ ಸ್ವತಂತ್ರ ಜಯಗಳಿಸಿದ್ದಾರೆ. ಐಕ್ಯರಂಗದ ಸದಸ್ಯರು ಬಿಜೆಪಿಗೆ ಮತ ಚಲಾಯಿಸಿರುವುದರೊಂದಿಗೆ ಆರೋಗ್ಯ- ಶಿಕ್ಷಣ ಸ್ಥಾಯಿ ಸಮಿತಿಯಲ್ಲಿ ಎಡರಂಗಕ್ಕೆ ಬಹುಮತ ನಷ್ಟಗೊಂಡಿದೆ.







