ಕಾಸರಗೋಡು: ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಿದ ವೃದ್ದನ ಮೃತದೇಹವನ್ನು ತಜ್ಞ ಪರೀಕ್ಷೆಗಾಗಿ ಕಾಸರಗೋಡಿನ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ. ಚೋಯಾಂಗೋಟ್‌ನ ಹಿರಿಯ ಆಟೋ ಚಾಲಕ ಕೆ. ಕೃಷ್ಣನ್ (68) ನಿನ್ನೆ ಮಧ್ಯಾಹ್ನ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮನೆಯಲ್ಲಿ ಏಕಾಂಗಿಯಾಗಿ ವಾಸಿಸುವ ಇವರು ಕಳೆದೆರಡು ದಿನದಿಂದ ಹೊರ ಬಾರದ ಹಿನ್ನೆಲೆಯಲ್ಲಿ ನೆರೆಮನೆಯವರು ನೋಡಿದಾಗ ಮನೆಯೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತ ದೇಹಕ್ಕೆ ಎರಡು ದಿನಕ್ಕಿಂತಲೂ ಹೆಚ್ಚು ಹಳಮೆ ಇದೆ ಎಂದು ಶಂಕಿಸಲಾಗಿದೆ. ಹೃದಯಾಘಾತ ಮರಣಕ್ಕೆ ಕಾರಣ ವೆಂದು ಪೊಲೀಸರು ತಿಳಿಸಿದ್ದು, ನೀಲೇಶ್ವರ ಪ್ರಿನ್ಸಿಪಲ್ ಎಸ್‌ಐ ಜಿ. ಜಿಷ್ಣು ಮಹಜರು ನಡೆಸಿದರು. ಮೃತರ ಪತ್ನಿ ವಿ. ಸುಶೀಲ ಈ ಹಿಂದೆ ನಿಧನರಾಗಿ ದ್ದಾರೆ. ಮಕ್ಕಳಾದ ಕೆ. ಶ್ರೀಜೇಶ್ (ಎರ್ನಾಕುಳಂ), ಡಾ. ಕೆ. ಶ್ರೀಷ್ಮಾ, ಅಳಿಯ ವಿ. ಆಶಿಶ್ (ಕೇರಳ ಗ್ರಾಮೀಣ ಬ್ಯಾಂಕ್ ಮುಳ್ಳೇರಿಯ) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






