ಕುಂಬಳೆ: ಬೀಗ ಜಡಿದ ಮನೆಗೆ ಕಳ್ಳರು ನುಗ್ಗಿ ವಿದೇಶಿ ಕರೆನ್ಸಿ, ನಗದು ಹಾಗೂ ವಾಚ್ಗಳನ್ನು ಕಳವುಗೈದ ಬಗ್ಗೆ ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿದೆ.
ಕಯ್ಯಾರು ಕೊಕ್ಕೆಚ್ಚಾಲ್ ಉಬೈಸ್ ಮಂಜಿಲ್ನ ಉಮ್ಮರ್ ಉಸೈದ್ ಎಂಬವರ ಮನೆಯಲ್ಲಿ ಈ ಕಳವು ನಡೆದಿದೆ. ಈತಿಂಗಳ ೧೨ರಂದು ಮನೆಯವರು ಬೀಗ ಜಡಿದು ಕಲ್ಲಿಕೋಟೆಗೆ ಹೋಗಿದ್ದರು. ಆ ಬಳಿಕ ಮನೆ ಮನೆಗೆ ಬಂದಾಗ ಕಳವು ನಡೆದ ವಿಷಯ ಅವರ ಗಮನಕ್ಕೆ ಬಂದಿದೆ. ಅದರಂತೆ ಉಮ್ಮರ್ ಉಸೈದ್ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಈತಿಂಗಳ 12ರಂದು 12 ಗಂಟೆಯಿಂದ ನಿನ್ನೆ 8 ಗಂಟೆಯೊಳಗಿನ ಯಾವುದೋ ಸಮಯದಲ್ಲಿ ಮನೆಯ ಬೀಗ ಒಡೆದು ಕಪಾಟಿನೊಳಗಿದ್ದ ಎರಡು ಬಿಟ್ಟೋ ವಾಚ್ಗಳು, ಒಂದು ರ್ಯಾಡೋ ವಾಚ್, 5೦,೦೦೦ರೂ.ನಗದು ಹಾಗೂ 1೦೦೦ ಯುಎಇ ದಿರ್ಹಾಂ ಕಳವುಗೈದಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಅದರಂತೆ ಪೊಲೀಸರು ಪ್ರಕರಣದ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.






