ತಿರುನಾವಾಯ: ಕೇರಳದ ಕುಂಭಮೇಳವೆಂದು ವಿಶೇಷಿಸಲ್ಪಡುವ ಮಹಾ ಮಾಘ ಮಹೋತ್ಸವಕ್ಕೆ ಭಾರತ ಹೊಳೆಯಲ್ಲಿ ವಿಶೇಷ ಪೂಜೆಗಳೊಂದಿಗೆ ಇಂದು ಚಾಲನೆ ದೊರೆಯಲಿದೆ. ಈತಿಂಗಳ 19ರಿಂದ ಫೆ. ೩ರವರೆಗೆ ಮಹಾ ಮಾಘ ಮಹೋತ್ಸವ ನಡೆಯಲಿದೆ. ೧೯ರಂದು ಬೆಳಿಗ್ಗೆ 11 ಗಂಟೆಗೆ ನಾವಾ ಮುಕುಂದಕ್ಷೇತ್ರ ಪರಿಸರದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೇಕರ್ ಕುಂಭಮೇಳ ಉದ್ಘಾಟಿಸುವರು. ಇದಕ್ಕಿರುವ ಸಿದ್ಧತೆಗಳು ಪೂರ್ತಿಗೊಂಡಿದೆಯೆಂದು ಮಹಾಮಾಘ ಸಭಾಪತಿ ಸ್ವಾಮಿ ಆನಂದವನಂ ಭಾರತಿ ಸ್ವಾಮೀಜಿ ತಿಳಿಸಿದ್ದಾರೆ. ಪ್ರಯಾಗ್ನಲ್ಲಿ ಕುಂಭಮೇಳಕ್ಕೆ ನೇತೃತ್ವ ನೀಡುವ ನಾಗ ಸನ್ಯಾಸಿಗಳ ಸಮೂಹವಾದ ಜುನ ಅಘಾಢ ಇಲ್ಲಿ ಕುಂಭಮೇಳಕ್ಕೆ ನೇತೃತ್ವ ನೀಡಲಿದೆ. ಪ್ರತಿದಿನ ಸಂಜೆ ನಿಳ ಆರತಿ ನಡೆಸಲಾಗುವುದು. ಇಂದು ಬೆಳಿಗ್ಗೆ ಸ್ವಾಮಿ ಅಭಿನವ ಬಾಲಾನಂದ ಭೈರವರವರ ಪೌರೋಹಿತ್ಯದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿದೆ.







