ಕೇರಳದ ಅರ್ಜಿ ಪರಿಗಣಿಸಿ ಸುಪ್ರೀಂಕೋರ್ಟ್ ನಿರ್ದೇಶ: ಎಸ್‌ಐಆರ್ ಸಮಯ ವ್ಯಾಪ್ತಿ ಇನ್ನೂ ಎರಡು ವಾರಗಳ ತನಕ ವಿಸ್ತರಣೆ

ತಿರುವನಂತಪುರ: ಮತದಾರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆಗಾಗಿ ಕೇರಳದಲ್ಲಿ ನಿಗದಿಪಡಿಸಲಾಗಿರುವ ಸಮಯಾವ ಕಾಶವನ್ನು ಇನ್ನೂ ಎರಡು ವಾರಗಳ ತನಕ ವಿಸ್ತರಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶ ನೀಡಿದೆ.  ಎಸ್‌ಐಆರ್ ವಿಷಯದಲ್ಲಿ  ಜನರು ಎದುರಿಸುತ್ತಿರುವ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಕೇರಳ ಸೇರಿದಂತೆ ಇತರ ರಾಜ್ಯದಲ್ಲಿ ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿ ಸುಪ್ರೀಂಕೋರ್ಟ್ ಈ ನಿರ್ದೇಶ ನೀಡಿದೆ.  ಎಸ್‌ಐಆರ್ ಕ್ರಮಗಳನ್ನು ಈ ತಿಂಗಳ 22ರೊಳಗೆ ಪೂರ್ತೀಕರಿಸುವಂತೆ ಆಯೋಗ ಈ ಹಿಂದೆ ಅಂತಿಮ ಗಡು ನೀಡಿತ್ತು. ಈಗ ಸುಪ್ರೀಕೋರ್ಟ್ ನೀಡಿರುವ ನಿರ್ದೇಶ ಹಿನ್ನೆಲೆಯಲ್ಲಿ  ಆ ಸಮಯವನ್ನು ಮತ್ತೆ ಎರಡು ವಾರಗಳ ತನಕ ವಿಸ್ತರಿಸಲು ಚುನಾವಣಾ ಆಯೋಗ  ಮುಂದಾಗ ಬೇಕಾಗಿಬಂದಿದೆ. ಎಸ್‌ಐಆರ್ ಕ್ರಮದಂತೆ ಮತದಾರ ಯಾದಿಯಿಂದ ಹೆಸರು ಹೊರತುಪಡಿಸಲ್ಪಟ್ಟ ಮತದಾರರ ಪೂರ್ಣ ಮಾಹಿತಿಗಳನ್ನು ಕೇಂದ್ರ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ ಶೀಘ್ರ ಪ್ರಕಟಿಸಬೇಕು. ಅಂತಹ ಕ್ರಮವನ್ನು ಈತನಕ ಕೈಗೊಳ್ಳದಿದ್ದಲ್ಲಿ ಅದನ್ನು ಶೀಘ್ರ ನಡೆಸಬೇಕು. ಈ ಪಟ್ಟಿವನ್ನು ಗ್ರಾಮ ಪಂಚಾಯತ್‌ಗಳೂ ಸೇರಿದಂತೆ ಸಂಬಂಧಪಟ್ಟ ಇತರ ಕಚೇರಿಗಳಲ್ಲಿ ಪ್ರದರ್ಶಿಸಬೇಕು ಮಾತ್ರವಲ್ಲ ಈ ವಿಷಯದಲ್ಲಿ ಪಾರದರ್ಶಕ ಖಾತರಿಪ ಡಿಸಬೇಕೆಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ ಮಲ್ಯ ಬಾಗ್ಚಿಯವರನ್ನೊಗೊಂಡ ಸುಪ್ರೀಂ ಕೋರ್ಟ್ ವಿಭಾಗೀಯ ಪೀಠ ಕೇಂದ್ರ ಚುನಾವಣಾ ಆಯೋಗಕ್ಕೆ ನೀಡಿದ ನಿರ್ದೇಶದಲ್ಲಿ ಸ್ಪಷ್ಟಪಡಿಸಿದೆ. ಅಂತಿಮ ಮತದಾರ ಯಾದಿಯನ್ನು ಫೆಬ್ರವರಿ ೨೧ರಂದು  ಪ್ರಕಟಿಸಲು ಚುನಾವಣಾ ಆಯೋಗ ಈ ಹಿಂದೆ ತೀರ್ಮಾನಿಸಿತ್ತು. ಸುಪ್ರೀಂಕೋರ್ಟ್ ಈಗ ನೀಡಿರುವ ಈ ಹೊಸ ನಿರ್ದೇಶದಿಂದಾಗಿ ಅಂತಿಮ ಮತದಾರ ಯಾದಿ ಪ್ರಕಟಿಸುವ ಸಮಯವನ್ನು ಮುಂದೂಡಬೇಕಾಗಿ ಬಂದಿದೆ.

RELATED NEWS

You cannot copy contents of this page