ಶಾಸಕ ಅಶ್ರಫ್‌ರ ಮುಷ್ಕರ ಜನರ ಕಣ್ಣಿಗೆ ಮಣ್ಣೆರಚಲು ಆರಿಕ್ಕಾಡಿ ಟೋಲ್ ಬೂತ್: ಬಿಜೆಪಿ ಪರಿಹಾರ ಕಾಣಲಿದೆಯೆಂದು ಅಶ್ವಿನಿ

ಕಾಸರಗೋಡು:  ಆರಿಕ್ಕಾಡಿ ಟೋಲ್ ಬೂತ್ ಹೆಸರಲ್ಲಿ ಶಾಸಕ ಎಕೆಎಂ ಅಶ್ರಫ್ ನಡೆಸುತ್ತಿರುವುದು ಜನರ ಕಣ್ಣಿಗೆ ಮಣ್ಣೆರಚಲಿರುವ ಯತ್ನ ಮಾತ್ರವಾಗಿದೆಯೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಆರೋಪಿಸಿದರು. ಆರಿಕ್ಕಾಡಿ ಟೋಲ್ ಬೂತ್‌ನ್ನು ಕೂಡಲೇ ತೆರವುಗೊಳಿಸಬೇಕೆಂದು, ಅದಕ್ಕಾಗಿ ಬಿಜೆಪಿ ಜಿಲ್ಲಾ, ರಾಜ್ಯ, ಕೇಂದ್ರ ನಾಯಕತ್ವ ಕೇಂದ್ರದ ಸಾರಿಗೆ ಸಚಿವಾಲಯವನ್ನು ಸಮೀಪಿಸಿರುವುದಾಗಿಯೂ ಅವರು ನುಡಿದರು.  ಆರಿಕ್ಕಾಡಿಯ ಟೋಲ್ ಬೂತ್ ಕಾನೂನು ವಿರುದ್ಧ ಹಾಗೂ  ಕೇಂದ್ರ ಸಾರಿಗೆ ಸಚಿವಾಲಯದ ನಿಲುವಿಗೆ ವಿರುದ್ಧವಾಗಿದೆಯೆಂದು ಬಿಜೆಪಿ ಜಿಲ್ಲಾ ಸಮಿತಿ  ಈ ಮೊದಲೇ  ಕೇಂದ್ರ ನಾಯಕತ್ವಕ್ಕೆ ತಿಳಿಸಿರುವುದಾಗಿಯೂ ಅವರು ನುಡಿದರು. ಕೇಂದ್ರ ಸಾರಿಗೆ ಸಚಿವಾಲಯ ಈ ವಿಷಯದಲ್ಲಿ ಕೂಡಲೇ ತೀರ್ಮಾನ ತೆಗೆಯಲಿದೆಯೆಂದು ಈ ಬಗ್ಗೆ ಕೇಂದ್ರ ನಾಯಕತ್ವ ರಾಜ್ಯ ನಾಯಕತ್ವಕ್ಕೆ ತಿಳಿಸಿರುವುದಾಗಿಯೂ ಅಶ್ವಿನಿ ನುಡಿದರು.

ಜನಪ್ರತಿನಿಧಿಯೆಂಬ ನೆಲೆಯಲ್ಲಿ ಸರಿಯಾದ ಮಧ್ಯಪ್ರವೇಶ ನಡೆಸುವುದರಲ್ಲಿ ಪರಾಜಯಗೊಂಡ ಅಶ್ರಫ್ ಅದನ್ನು ಮರೆಮಾಚಲು ಟೋಲ್ ವಿರುದ್ಧ ಮುಷ್ಕರದೊಂದಿಗೆ ಈಗ ರಂಗಕ್ಕಿಳಿದಿರುವುದಾಗಿಯೂ  ಅಶ್ವಿನಿ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

RELATED NEWS

You cannot copy contents of this page