ಅಡೂರು ಕ್ಷೇತ್ರದಲ್ಲಿ ಮಕರಸಂಕ್ರಮಣ ಉತ್ಸವದಂದು ಸೋಲಾರ್ ಪವರ್ ಸಿಸ್ಟಂ ಉದ್ಘಾಟನೆ

ಅಡೂರು: ಅಡೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಕರಸಂಕ್ರಮಣ ಉತ್ಸವ, ಸಹಸ್ರ ಕುಂಭಾಭಿಷೇಕ, ಉತ್ಸವ ಬಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು. ಇದೇ ವೇಳೆ ಸೋಲಾರ್ ಪವರ್ ಸಿಸ್ಟಂ ವ್ಯವಸ್ಥೆಯನ್ನು ಬ್ರಹ್ಮಶ್ರೀ ರವೀಶ ತಂತ್ರಿ ಉದ್ಘಾಟಿಸಿದರು. ಕರ್ನಾಟಕ ಬ್ಯಾಂಕ್ ಮಂಗಳೂರು ಸಿಒಒ ರಾಜ ಬಿ.ಎಸ್, ಸೆಲ್ಕೋ ಸೋಲಾರ್ ಲೈಟ್‌ನ  ಅಧಿಕಾರಿಗಳು ಉಪಸ್ಥಿತರಿದ್ದರು.  ಕಂಪ್ಯೂಟರ್ ಬಿಲ್ಲಿಂಗ್ ಸಿಸ್ಟಂನ್ನು ಕೇರಳ ಗ್ರಾಮೀಣ ಬ್ಯಾಂಕ್ ಕಾಸರಗೋಡು ರೀಜನಲ್ ಮೆನೇಜರ್ ಕೆ. ಗೋಪಕುಮಾರ್ ಉದ್ಘಾಟಿಸಿದರು. ಅಡೂರು ಶಾಖೆಯ ಮೆನೇಜರ್ ಸಿ. ರಿಜಿನ್ ಉಪಸ್ಥಿತರಿದ್ದರು. ಕ್ಷೇತ್ರ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಪ್ರಸಾದ್ ಅಧ್ಯಕ್ಷತೆ ವಹಿಸಿದರು. ಹಲವರು ಉಪಸ್ಥಿತರಿದ್ದರು. ಪವಿತ್ರಪಾಣಿ,  ರಾಧಾಕೃಷ್ಣ ಬಾರಿತ್ತಾಯ, ಜೀರ್ಣೋದ್ಧಾರ ಸಮಿತಿ ಸದಸ್ಯ ಎ. ಗೋಪಾಲ ಮಣಿಯಾಣಿ,  ಕಾರ್ಯಾಧ್ಯಕ್ಷ ಪ್ರಭಾಕರ ನಾಯಕ್ ಮಂಡಬೆಟ್ಟಿ, ಗುಂಡಿಮನೆ ಶ್ರೀಪತಿ ರಾವ್, ಡಾ| ಅಶೋಕ್ ರಾವ್, ಉತ್ಸವಸಮಿತಿ ಅಧ್ಯಕ್ಷ ರಾಮಚಂದ್ರ ಮಣಿಯಾಣಿ ಅತ್ತನಾಡಿ, ಉಪಾಧ್ಯಕ್ಷ ಬೆಳ್ಳಿಪ್ಪಾಡಿ ಸದಾಶಿವ ರೈ, ತಾಂತಡ್ಕ ಗಂಗಾಧರ ರಾವ್ ಸಹಕರಿಸಿದರು. ಸಮಿತಿ ಸದಸ್ಯರಾದ ರವಿನಾರಾಯಣ, ರವಿಶಂಕರ ನಾಯಕ್, ರಾಮ ನಾಯಕ್ ಅಡೂರು, ಅಕ್ಕಪ್ಪಾಡಿ ಕೃಷ್ಣ ಮಣಿಯಾಣಿ,  ಚೀನಪ್ಪಾಡಿ ರಮೇಶ, ಅಶೋಕ ನಾಯ್ಕ್ ಪಾಂಡಿ, ಕೃಷ್ಣಪ್ಪ ಮಾಸ್ತರ್ ಅಡೂರು ನೇತೃತ್ವ ವಹಿಸಿದರು. ಜಗದೀಶ್ ಪ್ರಸಾದ್ ಸ್ವಾಗತಿಸಿ, ಸಮಿತಿಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ರಾವ್ ವಂದಿಸಿದರು.

RELATED NEWS

You cannot copy contents of this page