ಕಾಸರಗೋಡು: ವಿಧಾನಸಭಾ ಚುನಾವಣೆಯ ಪೂರ್ವಭಾವಿ ಪ್ರಚಾರದಂಗವಾಗಿ ವಿರೋಧ ಪಕ್ಷ ನಾಯಕ ವಿ.ಡಿ. ಸತೀಶನ್ರ ನೇತೃತ್ವದಲ್ಲಿ ಯಾತ್ರೆ ನಡೆಸಲು ಯುಡಿಎಫ್ ತೀರ್ಮಾನಿಸಿದೆ. ಇದಕ್ಕೆ ‘ನವಯುಗ ಯಾತ್ರೆ’ ಎಂಬ ಹೆಸರಿಡಲಾಗಿದೆ. ಫೆಬ್ರವರಿ ೬ರಂದು ಕುಂಬಳೆಯಿಂದ ಪ್ರಯಾಣ ಆರಂಭಿಸಲಿದ್ದು, ಮಾರ್ಚ್ 6ರಂದು ತಿರುವನಂತಪುರದಲ್ಲಿ ಸಮಾಪ್ತಿಹೊಂದಲಿದೆ.
‘ಕೇರಳವನ್ನು ಮರುಗಳಿಸಲಾಗುವುದು’ ಎಂಬುದು ಈ ಯಾತ್ರೆಯ ಘೋಷಣೆಯಾಗಿದೆ. ಫೆ. 6ರಂದು ಕುಂಬಳೆಯಲ್ಲಿ ನಡೆಯಲಿರುವ ಯುಡಿಎಫ್ನ ಬೃಹತ್ ಕಾರ್ಯಕ್ರಮದಲ್ಲಿ ಯಾತ್ರೆ ಉದ್ಘಾಟನೆಗೊಳ್ಳಲಿದೆ. ಇದರಲ್ಲಿ ಯುಡಿಎಫ್ನ ಎಲ್ಲಾ ಘಟಕ ಪಕ್ಷಗಳ ನೇತಾರರು ಭಾಗವಹಿಸುವರು. ಬಳಿಕ ಯಾತ್ರೆ ಕಾಸರಗೋಡು ಮೂಲಕವಾಗಿ ರಾಜ್ಯದ ಎಲ್ಲಾ 140 ವಿಧಾನಸಭಾ ಕ್ಷೇತ್ರಗಳಲ್ಲಾಗಿ ಪರ್ಯಟನೆ ನಡೆಸಿದ ಮಾರ್ಚ್ 6ರಂದು ತಿರುವನಂತಪುರದಲ್ಲಿ ಸಮಾಪ್ತಿಹೊಂದಲಿದೆ. ಸಮಾರೋಪ ಸಮಾರಂಭದಲ್ಲಿ ಕಾಂಗ್ರೆಸ್ನ ಕೇಂದ್ರ ನೇತಾರರು ಹಾಗೂ ಯುಡಿಎಫ್ ಘಟಕ ಪಕ್ಷಗಳ ಉನ್ನತ ನಾಯಕರು ಭಾಗವಹಿಸಲಿರುವರು. ನವಯುಗ ಯಾತ್ರೆಯಂಗವಾಗಿ ಅಂದು ತಿರುವನಂತಪುರದಲ್ಲಿ ಬೃಹತ್ ರ್ಯಾಲಿಯೂ ನಡೆಯಲಿದೆ. ನಂತರ ಸಮಾರೋಪ ಕಾರ್ಯಕ್ರಮ ನಡೆಯಲಿದೆ.






