ಮೊಗ್ರಾಲ್: ಮೊಗ್ರಾಲ್ ಕಡಪ್ಪುರ ನಿವಾಸಿ ಮುಜೀಬ್ ರಹ್ಮಾನ್ (46) ಕೊಲ್ಲಿಯಲ್ಲಿ ಮೃತಪಟ್ಟ ಬಗ್ಗೆ ಊರಿಗೆ ಮಾಹಿತಿ ಲಭಿಸಿದೆ. ಯುಎಇ ಅಜ್ಮಾನ್‌ನ ವಾಸಸ್ಥಳದಲ್ಲಿ ಕುಸಿದು ಬಿದ್ದ ಇವರು ಕಳೆದೆರಡು ವಾರಗಳಿಂದ ಅಲ್ಲಿನ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದರು. ನಿನ್ನೆ ಮಧ್ಯಾಹ್ನ ಮೃತ ಪಟ್ಟಿರುವುದಾಗಿ ಮನೆಯವರಿಗೆ ಮಾಹಿತಿ ಲಭಿಸಿದೆ. ಮೃತರು ಪಿ.ಎಂ. ಅಬ್ದುಲ್ಲ- ನಫೀಸ ದಂಪತಿ ಪುತ್ರನಾಗಿದ್ದು, ಪತ್ನಿ ಶಹನಾಸ್, ಮಕ್ಕಳಾದ ನಫೀಸತ್ ಮಿರ್ಶಿಬ, ನಿಶಾನ ಫಾತಿಮ, ಮುಹಮ್ಮದ್ ಮುಹಾದ್, ಸಹೋದರಿ ಕುಂಞಿಬೀವಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತದೇಹವನ್ನು ಊರಿಗೆ ತರಲು ಸಿದ್ಧತೆ ನಡೆಸಲಾಗುತ್ತಿದೆ.






