ಕಾಸರಗೋಡು: ಪೋಕ್ಸೋ ಪ್ರಕರಣದಲ್ಲಿ ಆರೋಪಿಗಳಾದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. 14ರ ಬಾಲಕಿಯನ್ನು ದುರುದ್ದೇಶಪೂರ್ವಕ ಮನೆಗೆ ಕರೆದು ಬರಮಾಡಿಕೊಂಡಿರು ವುದಾಗಿ ನೀಡಿದ ದೂರಿನಂತೆ ಪೋಕ್ಸೋ ಪ್ರಕರಣದಲ್ಲಿ ಕೀಯೂರಿನ ರೋಶಿದ್ (19)ನನ್ನು ಮೇಲ್ಪರಂಬ ಪೊಲೀಸರು ಬಂಧಿಸಿದ್ದಾರೆ. ಈತನ ವಿರುದ್ಧ ಈ ಮೊದಲು ಕೂಡಾ ಪೋಕ್ಸೋ ಕೇಸು ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆಟೋಚಾಲಕನಾದ ಅಬೂಬಕ್ಕರ್ (50) ಎಂಬಾತನನ್ನು ಆದೂರು ಪೊಲೀಸರು ಬಂಧಿಸಿದ್ದಾರೆ. ಈತ ಉರುಡೂರು ಚೇಡಿಮೂಲೆ ನಿವಾಸಿಯಾಗಿದ್ದು, 13ರ ಬಾಲಕನಿಗೆ ಸಲಿಂಗರತಿ ಕಿರುಕುಳ ನೀಡಿರುವುದಾಗಿ ಆದೂರು ಪೊಲೀಸರು ದಾಖಲಿಸಿದ ಪ್ರಕರಣದಲ್ಲಿ ತಿಳಿಸಲಾಗಿದೆ.






