ಪತ್ನಿಗೆ ವೀಡಿಯೋ ಕರೆ ಮಾಡಿದ ಬಳಿಕ ಯುವಕ ನೇಣು ಬಿಗಿದು ಆತ್ಮಹತ್ಯೆ

ಕುಂಬಳೆ: ಪತ್ನಿಗೆ ವೀಡಿಯೋ ಕಾಲ್ ಮಾಡಿದ ಬಳಿಕ ಯುವಕ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ. ಕರ್ನಾಟಕ ಶಿವಮೊಗ್ಗ ನಿವಾಸಿ ಹಾಗೂ  ಪುತ್ತಿಗೆ ಪಂ. ಕಚೇರಿ ಸಮೀಪದ ಕ್ವಾರ್ಟರ್ಸ್‌ನಲ್ಲಿ ವಾಸವಾಗಿರುವ ರಿಸ್ವಾನ್ ಅಲಿ (32) ಮೃತಪಟ್ಟ ಯುವಕ. ಮರ ಕಡಿಯುವ ಕಾರ್ಮಿಕನಾಗಿದ್ದಾರೆ. ನಿನ್ನೆ ರಾತ್ರಿ ಪತ್ನಿ ಶಮೀಮಾ ಬಾನುರಿಗೆ ವೀಡಿಯೋ ಕಾಲ್ ಮಾಡಿದ ಬಳಿಕ ಆತ್ಮಹತ್ಯೆಗೈಯ್ಯುವುದಾಗಿ ತಿಳಿಸಿದ್ದನೆನ್ನಲಾಗಿದೆ. ಬಳಿಕ ಪತ್ನಿ ಫೋನ್ ಕರೆ ಮಾಡಿದರೂ ಪ್ರತಿಕ್ರಿಯೆ ಉಂಟಾಗಿರಲಿಲ್ಲ. ಮಾಹಿತಿ ತಿಳಿದು ಪರಿಚಯದವರು ತಲುಪಿದಾಗ ರಿಸ್ವಾನ್ ಅಲಿಯನ್ನು ನೇಣು ಬಿಗಿದ ಸ್ಥಿತಿಯಲ್ಲಿ ಕಂಡಿದ್ದಾರೆ. ಕೂಡಲೇ ಕೆಳಗಿಳಿಸಿ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದರಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಘಟನೆ ಬಗ್ಗೆ ತಿಳಿದು ಪತ್ನಿ ಹಾಗೂ ಸಂಬಂಧಿಕರು ಇಂದು ಬೆಳಿಗ್ಗೆ ಕುಂಬಳೆಗೆ ತಲುಪಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಊರಿಗೆ ಕೊಂಡೊಯ್ಯಲಾಗುವುದೆಂದು ಸಂಬಂಧಿಕರು ತಿಳಿಸಿದ್ದಾರೆ.

ಮೃತ ಯುವಕ ಅಮೀರ್‌ಜಾನ್- ಪ್ಯಾರೀಜಾನ್ ದಂಪತಿ ಪುತ್ರನಾಗಿದ್ದು, ಪತ್ನಿ, ಮಕ್ಕಳಾದ ಸುನಾನಖಾನ್, ಮುಹಮ್ಮದ್ ರಸೂಲ್, ಸಹೋದರ ಇಮ್ರಾನ್ ಅಲಿ, ಸಹೋದರಿಯರಾದ ರಶ್ಮಾಬಾನು, ಬಶೀರಬಾನು, ಶಬಾನಬಾನು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page