ಬದಿಯಡ್ಕ: ಬಸ್ಗೇರುತ್ತಿದ್ದ ಯುವಕನಿಗೆ ಹಿಂದಿನಿಂದ ಬಂದು ಕಬ್ಬಿಣದ ಲಿವರ್ನಿಂದ ತಲೆಗೆ ಹೊಡೆದು ಗಂಭೀರ ಗಾಯಗೊಳಿ ಸಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಇಬ್ಬರ ವಿರುದ್ಧ ಬದಿಯಡ್ಕ ಪೊಲೀಸರು ನರಹತ್ಯಾ ಯತ್ನ ಪ್ರಕರಣ ದಾಖಲಿಸಿಕೊಂ ಡಿದ್ದಾರೆ. ಬೇಳ ಪೂವಾಳೆತ್ತಡ್ಕ ಹೌಸ್ನ ರಾಜೇಶ್ ಪಿ (41) ನೀಡಿದ ದೂರಿನಂತೆ ನೀರ್ಚಾಲು ನಿವಾಸಿಗಳಾದ ಇಸಾಕ್ ಮತ್ತು ಫಾರೂಕ್ ಎಂಬವರ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ. ಜನವರಿ 14ರಂದು 7 ಗಂಟೆಗೆ ನೀರ್ಚಾಲು ಬಸ್ ನಿಲ್ದಾಣದಿಂದ ಕುಂಬಳೆಗೆ ಹೋಗಲೆಂದು ಬಸ್ಗೇರುತ್ತಿದ್ದ ವೇಳೆ ಆರೋಪಿಗಳು ಹಿಂದಿನಿಂದ ಬಂದು ನನ್ನನ್ನು ತಡೆದು ನಿಲ್ಲಿಸಿ ಕಬ್ಬಿಣದ ಲಿವರ್ನಿಂದ ಹೊಡೆದು ಗಾಯಗೊಳಿಸಿದ ರೆಂದೂ ಪೊಲೀಸರಿಗೆ ನೀಡಿದ ದೂರಿನಲ್ಲಿ ರಾಜೇಶ್ ಆರೋಪಿಸಿದ್ದಾರೆ.






