ಕುಂಬ್ಡಾಜೆ: ಕುಂಬ್ಡಾಜೆ ಮವ್ವಾರು ಅಜಿಲದ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ದಿ| ವೆಂಕಪ್ಪ ಶೆಟ್ಟಿಯವರ ಪತ್ನಿ ಪುಷ್ಪಲತಾ ವಿ ಶೆಟ್ಟಿ (72) ರ ಸಾವು ಕೊಲೆಯಾಗಿದೆ ಯೆಂದು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆಸ ಲಾದ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಸ್ಪಷ್ಟಗೊಂಡಿದೆ. ಇದಕ್ಕೆ ಸಂಬಂಧಿಸಿ ಪೆರಡಾಲ ನಿವಾಸಿ ಪರಮೇಶ್ವರ (47) ಎಂಬಾತನನ್ನು ಡಿವೈಎಸ್ಪಿ ಸಿ.ಕೆ. ಸುನಿಲ್ ಕುಮಾರ್ ನೇತೃತ್ವದಲ್ಲಿ ಬದಿಯಡ್ಕ ಪೊಲೀಸ್ ಎ. ಸಂತೋಷ್ ಕುಮಾರ್, ಎಸ್.ಐ ಎಂ. ಸವ್ಯಸಾಚಿ ಎಂಬವರನ್ನೊ ಳಗೊಂಡ ಪೊಲೀಸರ ತಂಡ ಬಂಧಿ ಸಿದೆ. ಈತ ಕೂಲಿ ಕಾರ್ಮಿಕನಾ ಗಿದ್ದು ಕೊಲೆಗೈಯ್ಯಲ್ಪಟ್ಟ ಪುಷ್ಪಲತಾರ ಹಿತ್ತಿಲಿಗೂ ಪೊದೆ ಕಡಿಯಲು ಬಂದಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಪುಷ್ಪಲತಾರನ್ನು ಕೊಲೆಗೈದಿರುವುದಾಗಿ ಮರಣೋತ್ತರ ಪರೀಕ್ಷೆಯಲ್ಲಿ ತಿಳಿಸಲಾಗಿದೆ. ಪುಷ್ಪಲತಾ ಜನವರಿ ೧೫ರಂದು ಅವರ ಮನೆಯಲ್ಲಿ ಕೊಲೆಗೈಯ್ಯ ಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕಳೆದ ಬುಧವಾರ ಹಗಲೇ ಈ ಕೊಲೆ ನಡೆದಿದೆಯೆಂದು ಪೊಲೀಸ್ ತನಿಖೆಯಲ್ಲಿ ಸ್ಪಷ್ಟಗೊಂಡಿದೆ.
ಆರೋಪಿ ಮತ್ತು ಕೊಲೆಗೈಯ್ಯಲ್ಪಟ್ಟ ಪುಷ್ಪಲತಾರ ಮಧ್ಯೆ ದಿಢೀರ್ ಉಂಟಾದ ವಾಗ್ವಾದವೇ ಕೊಲೆಗೆ ಕಾರಣವಾಗಿದೆಯೆಂದು ಪೊಲೀಸರು ಹೇಳುತ್ತಿದ್ದಾರೆ. ಕೊಲೆ ಬಳಿಕ ಪುಷ್ಪಲತಾರ ಕುತ್ತಿಗೆಯಿಂದ ಕಳವುಗೈಯ್ಯಲಾದ ಚಿನ್ನದ ಕರಿಮಣಿ ಸರವನ್ನು ಪೊಲೀಸರು ಆರೋಪಿಯ ಮನೆಯಿಂದ ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿ ದ್ದಾರೆ. ಕೊಲೆ ನಡೆದ 24 ತಾಸುಗಳೊಳಗಾಗಿ ಆರೋಪಿ ಯನ್ನು ಬಂಧಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಮನೆಗೆ ಆಗಮಿಸಿ ಸಮಗ್ರ ತನಿಖೆ ನಡೆಸಿದೆ.






