ಡಿಫಿ ಮಾನವಸರಪಳಿ: ಪೈವಳಿಕೆಯಲ್ಲಿ ಹೋರಾಟಗಾರರ ಸಂಗಮ

ಪೈವಳಿಕೆ: ಡಿವೈಎಫ್‌ಐ ಇಂದು ನಡೆಸುವ ಮಾನವ ಸರಪಳಿ ಪ್ರತಿಭಟನೆಯಂಗವಾಗಿ ಪೈವಳಿಕೆ ಬೋಳಂಗಳ ಸ್ಮೃತಿ ಮಂಟಪದಲ್ಲಿ ಹೋರಾಟಗಾರರ ಸಂಗಮ ನಡೆಯಿತು. ೧೯೮೭ರಲ್ಲಿ ಪ್ರಥಮವಾಗಿ ನಡೆಸಿದ ಮಾನವ ಸರಪಳಿಯಲ್ಲಿ ಭಾಗವಹಿಸಿದ್ದ ಹೋರಾಟಗಾರರು ಭಾಗವಹಿಸಿದರು. ಸಂಗಮವನ್ನು ಡಿಫಿ ಮುಖಂಡ ಅಹಮ್ಮದ್ ಹುಸೈನ್ ಪಿ.ಕೆ ಉದ್ಘಾಟಿಸಿದರು. ಬ್ಲೋಕ್ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ನಾರಾಯಣ ಶೆಟ್ಟಿ, ಅಬ್ದುಲ್ಲ ಕೆ, ನಾಗೇಶ ಬಾಯಾರು, ಬಾಬು, ಚಂದ್ರನಾಯ್ಕ್  ಮಾಣಿಪ್ಪಾಡಿ ಮಾತನಾಡಿದರು. ಬ್ಲೋಕ್ ಸಮಿತಿ ಕಾರ್ಯದರ್ಶಿ ಹಾರಿಸ್ ಪೈವಳಿಕೆ ಸ್ವಾಗತಿಸಿ,  ಪೈವಳಿಕೆ ವಿಲ್ಲೇಜ್ ಕಾರ್ಯದರ್ಶಿ ಆಕಾಶ್ ಕೋರಿಕ್ಕಾರ್ ವಂದಿಸಿದರು.

RELATED NEWS

You cannot copy contents of this page