ತಿರುವನಂತಪುರ: ಕೆಲಸ ಸಮಯದಲ್ಲಿ ಕಾರಿನಲ್ಲಿ ಕುಳಿತುಕೊಂಡು ಬಹಿರಂಗವಾಗಿ ಮದ್ಯಪಾನ ನಡೆಸುವ ಪೊಲೀಸರ ದೃಶ್ಯ ಬಹಿರಂಗಗೊಂಡ ಬೆನ್ನಲ್ಲೇ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ. ತಪ್ಪಿತಸ್ಥರಾದ 6 ಮಂದಿ ಪೊಲೀಸರನ್ನು ಅಮಾನತ ಗೊಳಿಸಲಾಗಿದೆ. ತಿರುವನಂತಪುರ ಕಳಕೂಟಂ ಪೊಲೀಸ್ ಠಾಣೆಯ 6 ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದ್ದು, ಇವರನ್ನು ಉತ್ತಮ ನಡತೆ ತರಬೇತಿಗಾಗಿ ಕಳುಹಿಸಲಾಗುವುದು. ಇತ್ತೀಚೆಗೆ ಕಾರಿನೊಳಗೆ ಕುಳಿತುಕೊಂಡು ಈ ಪೊಲೀಸರು ಮದ್ಯಪಾನಗೈಯ್ಯುತ್ತರುವ ದೃಶ್ಯ ಬಹಿರಂಗಗೊಂಡಿತ್ತು. ಇದರ ವಿರುದ್ಧ ವ್ಯಾಪಕ ಟೀಕೆಗಳುಂಟಾಗಿತ್ತು. ಅದರ ಬೆನ್ನಲ್ಲೇ ತನಿಖೆಗೆ ಆದೇಶಿಸಲಾಗಿತ್ತು. ಪೊಲೀಸರ ಕ್ರಮ ಗಂಭೀರ ಲೋಪವೆಂದು ಪ್ರಾಥಮಿಕ ತನಿಖಾ ವರದಿಯಲ್ಲಿ ತಿಳಿಸಲಾಗಿತ್ತು. ಕರ್ತವ್ಯದ ಸಮಯದಲ್ಲಿ ಮದ್ಯಪಾನಗೈದಿರುವುದನ್ನು ಯಾವುದೇ ಕಾರಣಕ್ಕೂ ಅಂಗೀಕರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಇವರನ್ನು ಅಮಾನತುಗೊಳಿಸಲಾಗಿದೆ.ಕಳಕೂಟಂ ಅಸಿಸ್ಟೆಂಟ್ ಕಮಿಶನರ್‌ಗೆ ವರದಿ ನೀಡಲಾಗಿತ್ತು.ನಿನ್ನೆ ಬೆಳಿಗ್ಗೆ ೧೧ ಗಂಟೆಗೆ ಠಾಣೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಸಿವಿಲ್ ಡ್ರಸ್‌ನಲ್ಲಿ ಪೊಲೀಸರು ಮದ್ಯ ಸೇವಿಸಿದ್ದರು. ಮದ್ಯಪಾನಗೈಯ್ಯುವ ದೃಶ್ಯವನ್ನು ಓರ್ವ ಚಿತ್ರೀಕರಿಸಿ ಉನ್ನತಾಧಿಕಾರಿಗೆ ಕಳುಹಿಸಿಕೊಡ್ಡಿದ್ದರು.







