ಮಾದಕಪದಾರ್ಥ ಸಾಗಾಟ: ಸೆರೆಯಾಗಿ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ ಆರೋಪಿ ಸಹಿತ ಇಬ್ಬರು ಉದುಮದ ವಸತಿಗೃಹದಲ್ಲಿ ಸೆರೆ

ಕಾಸರಗೋಡು: ಉದುಮ ಪಳ್ಳಂನ ವಸತಿಗೃಹದಲ್ಲಿ ಬೇಕಲ ಪೊಲೀಸರು ನಡೆಸಿದ ದಾಳಿಯಲ್ಲಿ ಇಬ್ಬರು ಸೆರೆಗೀಡಾಗಿದ್ದಾರೆ. ಪಳ್ಳಿಕ್ಕೆರೆ, ಪಳ್ಳಿಪುಳ ಸ್ನೇಹಾಲಯದ ಗೋಕುಲ್‌ರಾಜ್ (25), ಉದುಮ ಪಳ್ಳಂನ ಚಾಮತ್ತೋಟ್ಟಂ ಹೌಸ್ ನಿವಾಸಿ ಅನೀಶ್ ನಾರಾಯಣ (31) ಎಂಬಿವರನ್ನು ಬೇಕಲ ಎಸ್‌ಐ ಪಿ. ಅಖಿಲ್ ಹಾಗೂ ತಂಡ ಸೆರೆಹಿಡಿದಿದೆ.  ಸೋಮವಾರ ಸಂಜೆ ಎಸ್‌ಐಯವರ ನೇತೃತ್ವದಲ್ಲಿ ಪಳ್ಳಂನ ಕೋಡಂಗೈ ವಸತಿಗೃಹದಲ್ಲಿನ 101ನೇ ನಂಬ್ರ ಕೊಠಡಿಗೆ ದಾಳಿ ನಡೆಸಲಾಗಿತ್ತು. ಇಲ್ಲಿಂದ 3.87 ಗ್ರಾಂ ಎಂಡಿಎಂಎ  ಹಾಗೂ ಮಾದಕಪದಾರ್ಥ ಉಪ ಯೋಗಿಸುವುದಕ್ಕಿರುವ ಸಾಮಗ್ರಿಗಳನ್ನು ಪೊಲೀಸರು ವಶಪಡಿ ಸಿದ್ದರು. ಸೆರೆಯಾದ ಗೋಕುಲ್ ರಾಜೀವ್‌ನನ್ನು   ಶನಿವಾರ ರಾತ್ರಿ 9.45ಕ್ಕೆ ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್‌ನಿಂದ ಸೆರೆಹಿಡಿಯ ಲಾಗಿತ್ತು. ಈತ ಮಂಗಳೂರಿನಿಂದ ಕಾಸರಗೋಡಿಗೆ ಆಗಮಿಸುತ್ತಿದ್ದ ಕೆಎಸ್‌ಆರ್‌ಟಿಸಿ ಸ್‌ನ ಪ್ರಯಾಣಿಕ ನಾಗಿದ್ದನು. ತಪಾಸಣೆಯಲ್ಲಿ 0.52 ಗ್ರಾಂ ಮೆಥಾಫಿಟಾಮಿನ್, 2.38 ಗ್ರಾಂ ಗಾಂಜಾ ವಶಪಡಿಸಲಾಗಿತ್ತು. ಘಟನೆ ಯಲ್ಲಿ ಕುಂಬಳೆ ಅಬಕಾರಿ ರೇಂಜ್ ಆಫೀಸರ್ ಕೇಸು ದಾಖಲಿಸಿದ್ದರು. ಆದರೆ ಅಲ್ಪ ಪ್ರಮಾಣದ ಮಾದಕ ವಸ್ತುಗಳೆಂಬ ಕಾರಣದಿಂದ ಅಂದೇ ಈತನನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿತ್ತೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

RELATED NEWS

You cannot copy contents of this page