ಬ್ಯಾಂಕ್ ನೌಕರ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಹೊಸದುರ್ಗ: ಪುಲ್ಲೂರು ಸೇವಾ ಸಹಕಾರಿ ಬ್ಯಾಂಕ್ ನೌಕರ ಎಂ. ನಿಧೀಶ್ (35) ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪುಲ್ಲೂರು ಕೊಡವಳಂ ಪಟ್ಟರ್‌ಕಂಡಂ ನಿವಾಸಿಯಾಗಿದ್ದಾರೆ. ನಿನ್ನೆ ಸಂಜೆ ೬ ಗಂಟೆಗೆ ಕಾಞಂಗಾಡ್ ಕುಶಾಲನಗರ ಕಲ್ಲಂಚಿರ ರೈಲ್ವೇ ಹಳಿಯಲ್ಲಿ ಮೃತದೇಹ ಪತ್ತೆಯಾಗಿದೆ. ಸಂಬಂಧಿಕರು, ಗೆಳೆಯರು ತಲುಪಿ ಮೃತದೇಹದ ಗುರುತುಹಚ್ಚಿ ದ್ದಾರೆ. ಆರ್ಥಿಕ ಸಂದಿಗ್ಧತೆ ಹಿನ್ನೆಲೆಯಲ್ಲಿ ನಿಧೀಶ್ ಆತ್ಮಹತ್ಯೆಗೈದಿರಬೇಕೆಂದು ಶಂಕಿಸಲಾಗುತ್ತಿದೆ. ಹೊಸದುರ್ಗ ಪೊಲೀಸರು ಕೇಸು ದಾಖಲಿಸಿದ್ದಾರೆ. ದಿ| ನಿಟ್ಟೂರು ಕುಂಞಿರಾಮನ್- ಬಾಲಾಮಣಿ ದಂಪತಿ ಪುತ್ರನಾದ ನಿಧೀಶ್ ಪತ್ನಿ ವೀಣ, ಪುತ್ರ ನಿವಾನ್, ಸಹೋದರರಾದ ಎಂ. ನಾನುಶ್, ಎಂ. ನಿಕೇಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page