ಟೈಲರ್ ನಿಧನ

ಹೊಸಂಗಡಿ: ಕೊಪ್ಪಳ ಬಾದೆಮಾರ್ ನಿವಾಸಿ, ಮೇಲಂಗಡಿ ಯಲ್ಲಿ ಟೈಲರ್ ಆಗಿದ್ದ ಉದಯ ಕುಮಾರ್ (59) ನಿಧನ ಹೊಂದಿದರು. ಹೃದಯಾಘಾತ ವುಂಟಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಥಳೀಯ ಬಬ್ಬುಸ್ವಾಮಿ ದೈವಸ್ಥಾನ ಹಾಗೂ ಭಗವತೀ ಸೇವಾ ಸಂಘ ವಾಮಂಜೂರು ಇದರ ಕಾರ್ಯಕರ್ತರಾಗಿದ್ದರು. ದಿ| ನಾರಾಯಣ- ದಿ| ಗಿರಿಜ ದಂಪತಿ ಪುತ್ರನಾದ ಮೃತರು ಪತ್ನಿ ರಮಣಿ, ಮಕ್ಕಳಾದ ಶಿಥಿಲ, ಶ್ರಾವಣ್, ಸಹೋದರ ಕಣ್ಣಪ್ಪ ಬಾದೆಮಾರ್, ಸಹೋದರಿಯರಾದ ವಿದ್ಯಾವತಿ, ಶೈಲಜಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ ಶ್ರೀ ಭಗವತೀ ಸೇವಾಸಂಘ ವಾಮಂಜೂರು ಸಂತಾಪ ಸೂಚಿಸಿದೆ.

You cannot copy contents of this page