ಕಾಸರಗೋಡು: ಎಸ್‌ಐಆರ್ ಚಟುವಟಿಕೆಗೆ ಸಂಬಂಧಿಸಿ ಅತ್ಯುತ್ತಮ ಬೂತ್ ಲೆವೆಲ್ ಆಫೀಸರ್ ಆಗಿ ಆಯ್ಕೆಯಾದ ನೆಕ್ರಾಜೆ ನಿವಾಸಿ ರಾಜೇಶ್ ಸಿ.ಎಚ್.ರನ್ನು ಜಿಲ್ಲಾಧಿಕಾರಿ ಕೆ. ಇಂಭ ಶೇಖರ್ ಗೌರವಿಸಿದರು. ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಗೌರವಿಸಿದ್ದು, ಇವರು ಕಾಸರಗೋಡು ವಿಧಾನಸಭಾ ಕ್ಷೇತ್ರದ ೧೪೨ನೇ ಬೂತ್ ಲೆವೆಲ್ ಆಫೀಸರ್ ಆಗಿದ್ದಾರೆ. ಎಸ್‌ಐಆರ್‌ಗೆ ಸಂಬಂಧಿಸಿ ಎನ್ಯುಮರೇಶನ್ ಫಾರ್ಮ್ ವಿತರಿಸಿ ಭರ್ತಿ ಗೊಳಿಸಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದವರಲ್ಲಿ ಇವರು ಪ್ರಥಮರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇವರಿಗೆ ಅಭಿನಂದನೆ ಸಲ್ಲಿಸಲಾಗಿದೆ.







