ಕಾಸರಗೋಡಿನ ಜಿಲ್ಲಾಧಿಕಾರಿಯಾಗಿದ್ದ ಸಿ.ಕೆ. ವಿಶ್ವನಾಥನ್ ನಿಧನ

ಕಾಸರಗೋಡು: ಕೇರಳ ಸರಕಾರದ ನಿವೃತ್ತ ಕಾರ್ಯದರ್ಶಿ ಹಾಗೂ ಈ ಹಿಂದೆ ಕಾಸರಗೋಡು  ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ  ಸಿ.ಕೆ. ವಿಶ್ವನಾಥನ್ (೭೪) ನ್ಯುಮೋನಿಯಾ ನಿಮಿತ್ತ ಕೊಚ್ಚಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನ ಹೊಂದಿದರು. ಇವರು ಪತ್ತನಂತಿಟ್ಟ ಕಲಂತ್ತೂರು ನಿವಾಸಿಯಾಗಿದ್ದರು.

ಪರೀಕ್ಷಾ  ಆಯುಕ್ತ ಉದ್ಯೋ ಗ ಶಿಕ್ಷಣ ಕಾರ್ಯ ದರ್ಶಿ ಯಾ ಗಿಯೂ ಅವರು ಸೇವೆ ಸಲ್ಲಿಸಿದ್ದರು. ೧೯೯೮ರಿಂದ ೨೦೦೧ರ ತನಕ ಇವರು ಕಾಸರಗೋಡು ಜಿಲ್ಲಾಧಿ ಕಾರಿ ಯಾಗಿಯೂ ಸೇವೆ ಸಲ್ಲಿಸಿದ್ದರು. ಮಾತ್ರವಲ್ಲ ೨೦೧೦ರಿಂದ ೨೦೧೩ರ ತನಕ ಕೆ.ಬಿ. ಗಣೇಶ್ ಕುಮಾರ್ ಸಚಿವರಾಗಿದ್ದ ವೇಳೆ ಅವರ ಖಾಸಗಿ ಕಾರ್ಯ ದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ನಿವೃತ್ತ ಪ್ರೊಫೆಸರ್ ಕೆ. ವಿಜಯ ಕುಮಾರಿ,  ಮಗ ನ್ಯಾ. ಪ್ರತೀಕ್ ವಿಶ್ವನಾಥನ್, ಸೊಸೆ ಡಾ. ಆರ್. ಪಾರ್ವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page