ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾ

ಅಯೋಧ್ಯೆ: ಇಡೀ ವಿಶ್ವವೇ ಐತಿಹಾಸಿಕ ಕ್ಷಣಕ್ಕೆ ಕಾಯುತ್ತಿರುವ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ   ಶ್ರೀರಾಮ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಗೆ ಪೂರ್ವಭಾವಿ ಪೂಜಾ ವಿಧಿ-ವಿಧಾನ ಇಂದು ಬೆಳಿಗ್ಗೆ ವಿದ್ಯುಕ್ತವಾಗಿ ಆರಂ ಭಗೊಂಡಿದೆ.

ಗರ್ಭಗುಡಿಯಲ್ಲಿ ಪ್ರತಿಷ್ಠಾಪಿ ಸಲಾಗಿರುವ ಶ್ರೀರಾಮ ಮೂರ್ತಿಗೆ ೧೧೪ ಕಲಶ ಔಷಧಿಯ ಜಲದಿಂದ ಪುಣ್ಯಸ್ನಾನ ಮಾಡಿಸುವ ಮೂಲಕ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಗಳಿಗೆ ಇಂದು ಬೆಳಿಗ್ಗೆ ಚಾಲನೆ ನೀಡಲಾಯಿ ತು. ಪುಣ್ಯ ಸ್ನಾನದ ಬಳಿಕ  ಪ್ರತಿಷ್ಠಾಪಿಸಲಾಗಿರುವ ದೇವತೆಗಳಿಗೆ ನಿತ್ಯಪೂಜೆ, ಹವನ, ಪಾರಾಯಣ ನಡೆಸಲಾಯಿತು. ಪ್ರಾತಃ ಕಾಲ ಮಧ್ವಾಧೀನಗಳು, ಮಹಾ ಪೂಜೆ, ಉತ್ಸವಮೂರ್ತಿ ಪ್ರಸಾದ, ಪರಿಕ್ರಮ, ಶಾಯದಿ, ತತ್ವನ್ಯಾಯ, ಮಹನನ್ಯಾಸ, ಆದಿನ್ಯಾಸ, ಅಘೋರ ಹೋಮ, ನ್ಯಾಹೃತಿ ಹೋಮ, ಜಾಗರಣೆ, ಸಾಯಾಯ್ನಪೂಜೆ ಮತ್ತು ಆರತಿ ನಡೆಯಿತು.

ಶ್ರೀರಾಮ ವಿಗ್ರಹದ ಪ್ರಾಣ ಪ್ರತಿಷ್ಠೆ ಮಂಗಲಕರವಾದ ಸಮಯವಾದ ಇಂದು ಮಧ್ಯಾಹ್ನ ೧೨.೨೯ ನಿಮಿಷಗಳು ಮತ್ತು ೦.೮ ಸೆಕೆಂಡುಗಳಿಂದ ೧೨.೩೦ ನಿಮಿಷಗಳು ಮತ್ತು ೩೨ ಸೆಕೆಂಡುಗಳೊಳಗಾಗಿ ಅಭಿಜಿತ್ ಲಗ್ನದಲ್ಲಿ ನಡೆಯಲಿದೆ.  ಸಂಕ್ಷಿಪ್ತ ಅವಧಿಯು ಪವಿತ್ರೀಕರಣ ಹಾಗೂ ಪ್ರಕ್ರಿಯೆಯ ಪವಿತ್ರತೆ ಮತ್ತು ನಿಖರತೆಯನ್ನು ಸಂಕೇತಿಸುತ್ತಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪೂಜಾ ವಿಧಾನಗಳಿಗೆ ಅಧ್ಯಕ್ಷತೆ ವಹಿಸಿ ಶ್ರೀರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆ ನೆರವೇರಿಸಲಿದ್ದಾರೆ. ಖ್ಯಾತ ವೈದಿಕ ಆಚಾರ್ಯ ಗಣೇಶ್ವರ್ ದ್ರಾವಿಡ್ ಮತ್ತು ಆಚಾರ್ಯ ಲಕ್ಷ್ಮೀಕಾಂತ್ ದೀಕ್ಷಿತ್ ಅವರ ಮಾರ್ಗದರ್ಶನದಲ್ಲಿ ೧೨೧ ವೈದಿಕ ಆಚಾರ್ಯರು ಈ ಧಾರ್ಮಿಕ ಕ್ರಿಯೆಯನ್ನು ಆಯೋಜಿಸುತ್ತಿದ್ದಾರೆ. ೫೦ಕ್ಕೂ ಹೆಚ್ಚು ಬುಡಕಟ್ಟು, ಕರಾವಳಿ, ದ್ವೀಪ ಮತ್ತು ಬುಡಕಟ್ಟು ಸಂಪ್ರದಾಯಗಳೊಂದಿಗೆ ವೈವಿಧ್ಯಮಯ ಸಂಪ್ರದಾಯಗಳನ್ನು ಪ್ರತಿನಿಧೀಕರಿಸುವ ೧೫೦ಕ್ಕೂ ಹೆಚ್ಚು ಸಂತರು ಮತ್ತು  ಧಾರ್ಮಿಕ ಮುಖಂಡರು ಈ ಪವಿತ್ರ ಸಮಾರಂಭವನ್ನು ಅಲಂಕರಿಸುತ್ತಿದ್ದಾರೆ. ಪ್ರಾಣ ಪ್ರತಿಷ್ಠೆಯ ಸಂಪೂರ್ಣ ಕಾರ್ಯಕ್ರಮವು ಇಂದು ಮಧ್ಯಾಹ್ನ ೧ ಗಂಟೆಗೆ ಮುಕ್ತಾಯಗೊಳ್ಳುವುದು. ಆ ಬಳಿಕ ನಡೆಯುವ ಧಾರ್ಮಿಕ ಸಭೆಯಲ್ಲಿ ಪ್ರಧಾನಮಂತ್ರಿ ನರೇಂz ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಹಲವರು ಗಣ್ಯರು ಸಭೆಯನ್ನುದ್ದೇಶಿಸಿ ಮಾತನಾಡುವರು. ಶ್ರೀರಾಮ ಜನ್ಮಭೂಮಿ  ತೀರ್ಥ ಕ್ಷೇತ್ರದ ಅಧ್ಯಕ್ಷ ಮಹಂತ್ ನೃತ್ಯಗೋಪಾಲ್‌ದಾಸ್ ಆಶೀರ್ವಚನ ನೀಡುವರು.

ಶ್ರೀರಾಮ ಪ್ರತಿಷ್ಠಾಪನೆಯಂಗ ವಾಗಿ  ದೇಶಾದ್ಯಂತವಾಗಿ ಎಲ್ಲಾ ದೇವಸ್ಥಾನಗಳು, ಮಠಗಳು ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ಇಂದು ಮಧ್ಯಾಹ್ನ  ವಿಶೇಷ ಮಹಾಮಂಗಳಾರತಿ  ಮತ್ತು ಮಹಾಪೂಜೆ ನಡೆಸಲಾಯಿತು.

ಧಾರ್ಮಿಕ, ಸಾಂಸ್ಕೃತಿಕ, ಕಲೆ, ರಾಜಕೀಯ, ವಿಜ್ಞಾನ, ಕ್ರೀಡೆ, ಸಿನಿಮಾ ಸೇರಿದಂತೆ ವಿವಿಧ ವಲ ಯಗಳ ೭ ಸಾವಿರಕ್ಕೂ ಗಣ್ಯರಿಗೆ ಪ್ರಾಣಪ್ರತಿಷ್ಠಾ ಕಾರ್ಯಕ್ರಮಕ್ಕೆ ದೇವಾಲಯದ ಟ್ರಸ್ಟ್ ಆಹ್ವಾನ ನೀಡಿದೆ. ಇಡೀ ಅಯೋಧ್ಯಾ ಪುರಿಯ ಸರ್ವಾಂಗವನ್ನು ಅದ್ದೂರಿ ಯಿಂದ ಅಲಂಕರಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page