ಪ್ರಾಣಪ್ರತಿಷ್ಠೆ ಸಮಯದಲ್ಲಿ ವೆಲ್ಫೇರ್ ಫಂಡ್ ವಿತರಣೆ: ಕುಂಬಳೆ ಮರ್ಚೆಂಟ್ಸ್‌ನಲ್ಲಿ  ಮತ್ತೆ ವಿವಾದ

ಕುಂಬಳೆ: ದೇಶವೇ ಎಲ್ಲಾ ಕಾರ್ಯಕ್ರಮಗಳನ್ನು ಬದಿಗಿಟ್ಟು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಾತರದಿಂದ ಕಾಯುತ್ತಿದ್ದಾಗ ಅದೇ ಸಂದರ್ಭದಲ್ಲಿ ಕುಂಬಳೆ ವ್ಯಾಪಾರ ಭವನದಲ್ಲಿ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ವತಿಯಿಂದ ಧನ ಸಹಾಯ ಹಸ್ತಾಂತರ ಕಾರ್ಯಕ್ರಮವಿರಿಸಿಕೊಂ ಡಿರುವುದನ್ನು ಸಂಘಟನೆಯ ಒಂದು ವಿಭಾಗ  ವ್ಯಾಪಾರಿಗಳು ಖಂಡಿಸಿ ದ್ದಾರೆ.  ವ್ಯಾಪಾರಿಗಳ ಟ್ರೇಡ್ ವೆಲ್‌ಫೇರ್ ಸ್ಕೀಂನ ಸಹಾಯ ಧನವನ್ನು ನಿನ್ನೆ ವಿತರಿಸಲಾಗಿದೆ. ಈ ಕಾರ್ಯಕ್ರಮವನ್ನು ತುರ್ತಾಗಿ ತೀರ್ಮಾನಿಸಿದ್ದು, ಆ ದಿನವನ್ನು ಬದಲಿಸಬೇಕೆಂದು ಒಂದು ವಿಭಾಗ ವ್ಯಾಪಾರಿಗಳ ಬೇಡಿಕೆಯನ್ನು ತಿರಸ್ಕರಿಸಲಾಗಿದೆ. ಸಂಘಟನೆಯ ಈ ತೀರ್ಮಾನದಿಂದ ಕ್ಷೇತ್ರದ ಅರ್ಚಕರಾಗಿದ್ದವರಿಗೆ ಕೂಡಾ ಅಯೋಧ್ಯೆಯ ಕಾರ್ಯಕ್ರಮವನ್ನು ವೀಕ್ಷಿಸಲು ಅಸಾಧ್ಯವಾಗಿದ್ದು, ಇದು ಅತ್ಯಂತ ಖಂಡನೀಯವೆಂದು ಕುಂಬಳೆ ಘಟಕದ ಮಾಜಿ ಅಧ್ಯಕ್ಷ ವಿಕ್ರಂ ಪೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You cannot copy contents of this page