ಹೊಸಂಗಡಿ: ತಲಪಾಡಿ ಟೋಲ್ ಗೇಟ್ನಲ್ಲಿ ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ ವಾಹನಗಳಿಗೆ ಉಚಿತ ಸಂಚಾರ ಮಂಜೂರು ಮಾಡಬೇಕು ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರ ಮೂಲಕ ಕರ್ನಾಟಕ ಹೆದ್ದಾರಿ ಮುಖ್ಯಸ್ಥರಿಗೆ ಮನವಿ ಸಲ್ಲಿಸಿದೆ. ತಲಪಾಡಿ ಟೋಲ್ ಗೇಟ್ನಲ್ಲಿ ತಲಪಾಡಿ ಗ್ರಾಮದವರಿಗೆ ಉಚಿತ ಸಂಚಾರವಿದ್ದು, ಅದೇ ರೀತಿ ಮಂಜೇಶ್ವರ ಪಂಚಾಯತ್ ವ್ಯಾಪ್ತಿಯವರಿಗೂ ಉಚಿತ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕೆಂದು ಸಮಿತಿ ಆಗ್ರಹಿಸಿದೆ. ಮನವಿ ನೀಡಿದ ತಂಡದಲ್ಲಿ ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ., ಬಿಜೆಪಿ ಮುಖಂಡರಾದ ವಿಜಯ ಕುಮಾರ್ ರೈ, ಯತೀಶ್ ಭಂಡಾರಿ, ಕಾರ್ತಿಕ್ ಶೆಟ್ಟಿ, ನ್ಯಾಯವಾದಿ ನವೀನ್ರಾಜ್, ಆಶಾಲತಾ ಬಿ.ಎಂ. ಭಾಗವಹಿಸಿದರು. ಈ ಬಗ್ಗೆ ಅಧಿಕಾರಿಗಳಲ್ಲಿ ಮಾತನಾಡಿ ಕ್ರಮ ಕೈಗೊಳ್ಳುವ ಭರವಸೆ ಬ್ರಿಜೇಶ್ ಚೌಟ ನೀಡಿದರು.







