ಅಯೋಧ್ಯೆ, ವಾರಣಾಸಿ, ಮಥುರಾ ಕ್ಷೇತ್ರಗಳಿಗೆ ಇಸ್ರೇಲ್ ಆಂಟಿ ಡ್ರೋನ್ ಭದ್ರತೆ
ಅಯೋಧ್ಯೆ: ಅಯೋಧ್ಯೆಗೆ ಪ್ರವಹಿಸುತ್ತಿರುವ ಭಕ್ತರ ನಿಬಿಡತೆ ದಿನೇ ದಿನೇ ಹೆಚ್ಚುತ್ತಿರುವಂತೆಯೇ ಅದರ ಜತೆಗೆ ಇನ್ನೊಂದೆಡೆ ಉಗ್ರಗಾಮಿಗಳ ದಾಳಿ ಬೆದರಿಕೆಯೂ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಇಸ್ರೇಲ್ ನಿರ್ಮಿತ ಅಯೋಧ್ಯೆಯಲ್ಲಿ ಆಂಟಿ ಡ್ರೋನ್ ಭದ್ರತೆ ಏರ್ಪಡಿಸಲು ಉತ್ತರ ಪ್ರದೇಶ ಪೊಲೀಸರು ಮುಂದಾಗಿದ್ದಾರೆ. ಅಯೋಧ್ಯೆ ದೇವಾಲಯದ ಭದ್ರತೆಗಾಗಿ ಈಗಾಗಲೇ ವಿಶೇಷ ಕಮಾಂಡರ್ಗಳನ್ನು ನಿಯೋಜಿಸಲಾಗಿದೆ. ಇನ್ನು ಇಲ್ಲಿ ಡ್ರೋನ್ ವಿರೋಧಿ ವ್ಯವಸ್ಥೆಗಳನ್ನು ಸ್ಥಾಪಿಸಲಾಗುವುದು. ಇದಕ್ಕಾಗಿರುವ ವಿಶೇಷ ಡ್ರೋನ್ಗಳನ್ನು ಇಸ್ರೇಲ್ನಿಂದ ಖರೀದಿಸಲು ತೀರ್ಮಾನಿಸಲಾಗಿದ್ದು, ಆ ಪ್ರಕ್ರಿಯೆ ಈಗ ಅಂತಿಮ ಹಂತದಲ್ಲಿದೆ. ಮಾಹಿತಿ ಪ್ರಕಾರ ಯುಪಿ ಪೊಲೀಸರು ಇಂತಹ ೧೦ ಆಂಟಿ ಡ್ರೋನ್ ವ್ಯವಸ್ಥೆಗಳನ್ನು ಖರೀದಿಸಲಿದ್ದಾರೆ. ಅಯೋಧ್ಯೆಯ ಹೊರತಾಗಿ ಮಥುರಾ, ಲಕ್ನೋ ಮತ್ತು ವಾರಣಾಸಿಗಳಂತಹ ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲೂ ಇಂತಹ ಆಂಟಿ ಡ್ರೋನ್ಗಳನ್ನು ಭದ್ರತೆಗಾಗಿ ನಿಯೋಜಿಸುವ ತೀರ್ಮಾನವನ್ನು ಯುಪಿ ಸರಕಾರ ಕೈಗೊಂಡಿದೆ. ಈ ಆಂಟಿ ಡ್ರೋನ್ ೫ ಕಿ.ಮಿ. ವರೆಗೆ ವಿಶೇಷ ನಿಗಾ ಇರಿಸಲಿದೆ. ಮಾತ್ರವಲ್ಲ ೩-೫ ಕಿ.ಮೀ. ವ್ಯಾಪ್ತಿಯಲ್ಲಿ ಬರುವ ಯಾವುದೇ ಡ್ರೋನ್ಗಳನ್ನು ಕ್ಷಣ ಮಾತ್ರದಲ್ಲಿ ನಾಶಪಡಿಸುತ್ತದೆ. ಇದು ಯಾವುದೇ ಡ್ರೋನ್ಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿದೆ. ಇದು ಇತರ ಲೇಸರ್ ಆಧಾರಿತ ವ್ಯವಸ್ತೆಯಾಗಿದ್ದು, ಶತ್ರು ಡ್ರೋನ್ಗಳನ್ನು ಪತ್ತೆ ಹಚ್ಚುವ ಮೂಲಕ ಅವುಗಳನ್ನು ನಾಶಪಡಿಸುವ ಸಾಮರ್ಥ್ಯವನ್ನೂ ಹೊಂದಿದೆ.
ಭದ್ರತಾ ಸಂಸ್ಥೆಗಳು ಮತ್ತು ಡ್ರೋನ್ಗಳ ಬಗ್ಗೆ ಸಮಯೋಜಿತ ಮಾಹಿತಿಗಳು ಇದು ಪಡೆಯುತ್ತಿದೆ. ಇದು ಮಾತ್ರವಲ್ಲ ಈ ವ್ಯವಸ್ಥೆಯ ಶತ್ರು ಡ್ರೋನ್ಗಳನ್ನು ಹ್ಯಾಕ್ ಮಾಡುವ ವಿಶೇಷ ಸಾಮರ್ಥ್ಯವನ್ನೂ ಹೊಂದಿದೆ. ಈ ವ್ಯವಸ್ಥೆಯ ಹೊರತಾಗಿ ಇತರ ಯಾವುದೇ ಬಾಹ್ಯ ಡ್ರೋನ್ಗಳನ್ನು ಗುರಿಯಾಗಿಸಿ ಅವುಗಳನ್ನು ಬೀಳಿಸುವ ಸ್ವೈಪರ್ಗಳನ್ನು ಅಯೋಧ್ಯೆಯಲ್ಲಿ ನಿರ್ಮಿಸಲಾಗಿದೆ.