ಆಲಪ್ಪುಳ: ಒಬಿಸಿ ಮೋರ್ಛಾದ ರಾಜ್ಯ ಕಾರ್ಯ ದರ್ಶಿ ನ್ಯಾಯವಾದಿ ರಂಜಿತ್ ಶ್ರೀನಿವಾಸನ್ರನ್ನು ಕೊಲೆ ಗೈದ ಪ್ರಕರಣದ ೧೫ ಆರೋಪಿಗಳಿಗೆ ಮಾವೇಲಿಕ್ಕರ ಅಡಿಶನಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಕೊಲೆ ಪ್ರಕರಣವೊಂದರಲ್ಲಿ ೧೫ ಮಂದಿ ಆರೋಪಿಗಳಿಗೆ ಒಂದೇ ಬಾರಿ ಗಲ್ಲು ಶಿಕ್ಷೆ ವಿಧಿಸಿರುವುದು ಕೇರಳದ ನ್ಯಾಯಾಂಗ ಇತಿಹಾಸದಲ್ಲೇ ಇದು ಪ್ರಥಮವಾಗಿದೆ.
ಪೋಪುಲರ್ ಫ್ರೆಂಟ್ ಕಾರ್ಯಕರ್ತರಾದ ಆಲಪ್ಪುಳ ಕೋಮಳಪುರಂ ಅಂಬನಕುಳಂಗರ ಮಾಚನಾಡ್ ಕಾಲನಿಯ ನೈಸಾಂ, ಮಣ್ಣಂಚೇರಿ ಅಂಬಲಕಡವು ವಡಕ್ಕೇಚಿರಪುರಂ ಅಜ್ಮಲ್, ಆಲಪ್ಪುಳ ವೆಸ್ಟ್ ಮುಂಡು ವಾಡೈಕಲ್ ಅನೂಪ್, ಆರ್ಯಾಡ್ ತೆಕ್ಕ್ ಅವಲುಕುನ್ನು ಇರಕ್ಕಾಟ್ ಮುಹಮ್ಮದ್ ಅಸ್ಲಾಂ, ಮಣ್ಣಂಚೇರಿ ಞಾರವೇಲಿಲ್ ಅಬ್ದುಲ್ ಕಲಾಂ (ಸಲಾಂ), ಅಡಿವಾರಂ ದಾರುಸ್ಸಬೀನ್ ವೀಟಿಲ್ ಅಬ್ದುಲ್ ಕಲಾಂ, ಆಲಪ್ಪುಳ ವೆಸ್ಟ್ ತೈವೇಲಿಕ್ಕದಂ ಸರಫುದ್ದೀನ್, ಮಣ್ಣಂಚ್ಚೇರಿ ಉಡುಂಬಿತ್ತರ ಮನ್ಶಾದ್, ಆಲಪ್ಪುಳ ವೆಸ್ಟ್ ಕಡವತ್ತ್ ಶ್ಶೇರಿ ಜಸೀಬ್ ರಾಜ, ಕೋಮಳಪುರಂ ತೈಯ್ಯಿಲ್ ಸಮೀರ್, ಮಣ್ಣಂಚ್ಚೇರಿ ನೋರ್ತ್ ಆರ್ಯಾಡ್ ಮಣ್ಣಾರ್ಕ್ಕಾಡ್ ನಸೀರ್, ಮಣ್ಣಾಂಚೇರಿ ಚಾವಡಿಯಿಲ್ ಸಕೀರ್ ಹುಸೈ, ತೆಕ್ಕೇವಿಳಿಯಿಲ್ ಶಾಜಿ (ಪೂವತ್ತಿಲ್ ಶಾಜಿ), ಮುಲ್ಲೈಕಲ್ ನೂರುದ್ದೀನ್ ಪುರಯಿಡತ್ತಿಲ್ ಶೆರ್ನಾಸ್ ಅಶ್ರಫ್ ಎಂಬಿವರಿಗೆ ಶಿಕ್ಷೆ ವಿಧಿಸಲಾಗಿದೆ. ೨೦೨೧ ಡಿಸೆಂಬರ್ ೧೯ರಂದು ರಂಜಿತ್ ಶ್ರೀನಿವಾಸನ್ರನ್ನು ಆಲಪ್ಪುಳ ವೆಳ್ಳಕ್ಕಿಣ್ಣಾರ್ನ ಮನೆಗೆ ನುಗ್ಗಿ ಆರೋಪಿಗಳು ಕಡಿದು ಕೊಲೆಗೈದಿರುವುದಾಗಿ ಕೇಸು ದಾಖಲಿಸಲಾಗಿದೆ.