ಆದಿ ದ್ರಾವಿಡ ಸಮಾಜ ಸೇವಾ ಸಂಘ ಸಭೆ: ನೂತನ ಜಿಲ್ಲಾ ಸಮಿತಿ ರೂಪೀಕರಣ

ಅಡೂರು: ಪರಿಶಿಷ್ಟ ಜಾತಿ ಗೊಳಪಟ್ಟ ಆದಿದ್ರಾವಿಡ ಸಮುದಾ ಯದ ಬೃಹತ್ ಸಭೆ ಇತ್ತೀಚೆಗೆ ಅಡೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಸಭಾಂಗಣದಲ್ಲಿ ಜರಗಿತು. ಸಂಘದ ಜಿಲ್ಲಾಧ್ಯಕ್ಷ ಗುಣಪಾಲರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಜಿಲ್ಲಾ ಅಧ್ಯಕ್ಷ ಗುಣಪಾಲರವರು ಬಾಬಾ ಸಾಹೇಬ್ ಅಂಬೇಡ್ಕರ್‌ರ ಭಾವಚಿತ್ರಕ್ಕೆ ಪುಷ್ಪಾಚರಣೆಗೈದು ಉದ್ಘಾಟಿಸಿ ಮಾತನಾಡಿದರು. ಆದಿ ದ್ರಾವಿಡ ಸಮುದಾಯದ ಹಿರಿಯ ಮುಖಂಡ ವೀರಪ್ಪಕೈತೋಡು, ಸೀನ ಮಂಞಪ್ಪಾರ, ಕುಂಞಪ್ಪ ಮಂಞಪ್ಪಾರ, ಸುರೇಶ್ ಕಾಸರಗೋಡು, ರಾಮಚಂದ್ರ ಕಾಸರಗೋಡು, ಸಂತೋಷ್ ಸಿ.ಎ. ನಗರ ಉಪಸ್ಥಿತರಿದ್ದರು.

ನೂತನ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು. ಜಿಲ್ಲಾ ಅಧ್ಯಕ್ಷರಾಗಿ ಗುಣಪಾಲ ಪುನರಾಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಶೀನ ಮಂಞಪ್ಪಾರ, ಆನಂದ ಮಂಞಪ್ಪಾರ ಮುತ್ತಪ್ಪ ದೇವರಡ್ಕ ಅಡೂರು, ಗುಲಾಬಿ ಕುಂಬಳೆ, ಸೌಧಾಮಿನಿ ಕಾಞಂಗಾಡು, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಕಾಸರ ಗೋಡು, ಜತೆ ಕಾರ್ಯದರ್ಶಿಗಳಾಗಿ ಸುಂದರ ನೆಟ್ಟಣಿಗೆ, ಸಂತೋಷ್ ಸಿ.ಎ. ನಗರ ಆದೂರು, ಬಾಬು ಎಡಪರಂಬ ಅಡೂರು, ಜಯರಾಮ ಪುತ್ರಕಳ, ಕೋಶಾಧಿಕಾರಿಯಾಗಿ ಕುಂಞಪ್ಪ ಮಂಞಪ್ಪಾರ ಆದೂರು, ಸಹ ಕೋಶಾಧಿಕಾರಿಯಾಗಿ ರಾಧಾಕೃಷ್ಣ ಮಂಞಪ್ಪಾರ, ಸಂಘಟನಾ ಕಾರ್ಯದರ್ಶಿಯಾಗಿ ರಾಮಚಂದ್ರ ಕಾಸರಗೋಡು ಆಯ್ಕೆಯಾಗಿದ್ದಾರೆ.

ಹದಿನಾರು ಜನರನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ. ವೀರಪ್ಪ ಕೈತೋಡು, ಶೀನ ಮಂಞಪ್ಪಾರ, ಕುಂಞಪ್ಪ ಮಂಞಪ್ಪಾರ ಅವರು ಆದಿ ದ್ರಾವಿಡ  ಸಮಾಜದ ಮುಂದಿನ ಧ್ಯೇಯೋದ್ದೇಶ ಗಳನ್ನು ವಿವರಿಸಿ ಶುಭ ಹಾರೈಸಿದರು.

You cannot copy contents of this page