ಸಾಮಗ್ರಿ ಮಾರಾಟ ಮಾಡಿ ಲಭಿಸಿದ ೩೨ ಲಕ್ಷ ರೂ.  ಸೇಲ್ಸ್ ಎಕ್ಸಿಕ್ಯೂಟಿವ್ ವಂಚಿಸಿರುವುದಾಗಿ ದೂರು: ಪೊಲೀಸರಿಂದ ತನಿಖೆ ಆರಂಭ

ಕುಂಬಳೆ:   ಸಾಮಗ್ರಿಗಳನ್ನು ವಿತ ರಣೆ ನಡೆಸಿದ ೩೨ ಲಕ್ಷ ರೂ.ವನ್ನು ಸೇಲ್ಸ್ ಎಕ್ಸಿಕ್ಯೂಟಿವ್ ಸ್ವಂತ ಖಾತೆಗೆ  ವರ್ಗಾಯಿಸಿರುವುದಾಗಿಯೂ,  ಆ ಬಳಿಕ ಅದೇ ಸಂಸ್ಥೆಯ ೧೦೦ ಮೀ ಟರ್ ದೂರದಲ್ಲಿ ಇದೇ ರೀತಿಯ ಇನ್ನೊಂದು ಸಂಸ್ಥೆಯನ್ನು ಆರಂಭಿಸಿರು ವುದಾಗಿಯೂ ಕುಂಬಳೆ ಶಾಂತಿಪಳ್ಳ ಬದ್ರಿಯ ನಗರದ ಗಬ್ಬಾನ ಮ್ಯಾಟ್ರಸ್ ಸಂಸ್ಥೆಯ ಮಾಲಕ ಪ್ರದೀಪ್ ಕುಮಾರ್ ಶರ್ಮ ನ್ಯಾಯಾಲಯಕ್ಕೆ ದೂರು ನೀಡಿದರು. ದೂರಿನ ಬಗ್ಗೆ ತನಿಖೆ ನಡೆಸಿ ಕೇಸು ದಾಖಲಿಸಲು ನ್ಯಾಯಾಲಯ   ಕುಂಬಳೆ ಪೊಲೀ ಸರಿಗೆ ಸೂಚಿಸಿದೆ. ಯುಪಿ ನಿವಾಸಿ ಯಾದ ಪ್ರದೀಪ್ ಕುಮಾರ್ ಶರ್ಮ ೨೦೨೦ರಲ್ಲಿ ಕುಂಬಳೆ ಶಾಂತಿಪಳ್ಳ ಬದ್ರಿಯಾ ನಗರದಲ್ಲಿ ಗಬ್ಬಾನ ಮ್ಯಾಟ್ರಸ್ ಎಂಬ ಸಂಸ್ಥೆಯನ್ನು ಸಹೋ ದರನನ್ನೂ ಸೇರಿಸಿಕೊಂಡು ಆರಂಭಿ ಸಿದ್ದರು. ಆದರೆ  ಕೊರೊನಾ ಹಿನ್ನೆಲೆ ಯಲ್ಲಿ ಸಹೋದರ ಊರಿಗೆ ಹಿಂತಿರು ಗಿದ ಕಾರಣ ಯುಪಿ ನಿವಾಸಿಯಾದ ಅನಿಲ್ ಕುಮಾರ್ ಸಿಂಗ್ ಎಂಬಾತನನ್ನು ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ನೇಮಕಗೊಳಿಸಿದ್ದರು.  ಹಾಸಿಗೆಗಳಿಗೆ ಅಂಗಡಿಗಳಿಂದ ಆರ್ಡರ್ ಪಡೆದು ವಿತರಿಸುವುದು, ಹಣ ಸಂಗ್ರಹಿಸುವುದು ಇವರ ಕೆಲಸವಾಗಿದೆ. ಮೊದಮೊದಲು  ಸರಿಯಾಗಿ ಈ ಕೆಲಸ ನಿರ್ವಹಿಸುತ್ತಿದ್ದ ಈ ವ್ಯಕ್ತಿ ಬಳಿಕ ಹಾಸಿಗೆ ಮಾರಾಟ ಮಾಡಿ ಲಭಿಸುವ ಹಣವನ್ನು ತನ್ನ ಸ್ವಂತ ಖಾತೆಯಲ್ಲಿ ಠೇವಣಿ ಇರಿಸುತ್ತಿದ್ದನು.  ೩೨ ಲಕ್ಷ ರೂ. ಈ ರೀತಿಯಲ್ಲಿ ವಂಚಿಸಿ ದ ಬಳಿಕ ಗಬ್ಬಾನ ಮ್ಯಾಟ್ರಸ್‌ನ ೧೦೦ ಮೀಟರ್ ದೂರದಲ್ಲಿ ಜ್ಯೋತಿ ಮ್ಯಾಟ್ರಸ್ ಎಂಬ ಇನ್ನೊಂದು ಸಂಸ್ಥೆ ಈತ ಆರಂಭಿಸಿದನು. ಈ ಹಿನ್ನೆಲೆಯಲ್ಲಿ ತನ್ನ ಉದ್ಯಮವನ್ನು ಬುಡಮೇಲುಗೊಳಿ ಸಲು ಶ್ರಮಿಸುತ್ತಿರು ವುದಾಗಿ ಪ್ರದೀಪ್ ಕುಮಾರ್ ದೂರು ನೀಡಿದ್ದಾರೆ. ಪ್ರದೀಪ್ ಕುಮಾರ್ ಸೂರಂಬೈಲ್‌ನಲ್ಲಿ ವಾಸಿಸುತ್ತಿದ್ದು ಪ್ರತಿಸ್ಪರ್ಧಿ ನಾಯ್ಕಾಪಿನಲ್ಲಿ  ವಾಸಿಸುತ್ತಿದ್ದಾರೆನ್ನಲಾಗಿದೆ.

Leave a Reply

Your email address will not be published. Required fields are marked *

You cannot copy content of this page