ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಮತ್ತೆ ಏರಿಕೆ

ನವದೆಹಲಿ: ತೈಲ ಮಾರುಕಟ್ಟೆ ಕಂಪೆನಿಗಳು (ಒಎಂಸಿ) ವಾಣಿಜ್ಯ ಎಲ್‌ಪಿಜಿ ಬೆಲೆಯನ್ನು ಮತ್ತೆ ಹೆಚ್ಚಿಸಿದೆ.

ಇದರಂತೆ ೧೯ ಕೆ.ಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ೧೪ ರೂ.ನಂತೆ ಹೆಚ್ಚಿಸಲಾಗಿದೆ. ಈ ಹೊಸದರ ಇಂದಿನಿಂದಲೇ ಜ್ಯಾರಿಗೊಳಿಸಲಾಗಿದೆ.

ಬೆಲೆಯೇರಿಕೆ ನಂತರ ದಿಲ್ಲಿಯಲ್ಲಿ ೧೯ ಕೆ.ಜಿ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಚಿಲ್ಲರೆ ಮಾರಾಟ ಬೆಲೆ ಈಗ ೧,೭೫೯.೫೦ ರೂ.ಗೇರಿದೆ. ಇತರ ರಾಜ್ಯಗಳಲ್ಲಿ ಸಾಗಾಣಿಕೆ ವೆಚ್ಚ ಸೇರಿ ಬೆಲೆಯಲ್ಲಿ ವ್ಯತ್ಯಾಸ ಉಂಟಾಗಲಿದೆ. ಆದರೆ ದೇಶೀಯ ಎಲ್‌ಪಿಜಿ ಸಿಲಿಂಡರ್ ಬೆಲೆಗಳ ದರದಲ್ಲಿ ಯಾವುದೇ ರೀತಿಯ ಬದಲಾವಣೆ ಉಂಟಾಗಿಲ್ಲ.

ಕೇಂದ್ರ ಬಜೆಟ್ ಇಂದು ಮಂಡಿಸಿರುವ ವೇಳೆಯಲ್ಲೇ ಎಲ್‌ಪಿಜಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಹೆಚ್ಚಿಸಲಾಗಿದೆ ಎಂಬ ವಿಶೇಷತೆಯೂ ಇದಕ್ಕಿದೆ. ಇದರಿಂದಾಗಿ ಹೋಟೆಲ್ ಆಹಾರಗಳ ಬೆಲೆಯಲ್ಲೂ ಏರಿಕೆ ಉಂಟಾಗುವ ಸಾಧ್ಯತೆಯೂ ಇದೆ.

You cannot copy contents of this page