ಬೆಂಗಳೂರು: ಬೆಂಗಳೂರಿನಲ್ಲಿ ವಾಸಿಸಿ ಕೆಲಸ ನಿರ್ವಹಿಸುತ್ತಿರುವ ಕೇರಳೀಯಳಾದ ಯುವತಿ ಲೈಂಗಿಕ ದೌರ್ಜನ್ಯಕ್ಕೊಳಗಾದ ಬಗ್ಗೆ ದೂರಲಾಗಿದೆ. ಬೆಂಗಳೂರಿನ ಕೆಫೆಯಲ್ಲಿ ಪಾರ್ಟ್‌ಟೈಂ ಕೆಲಸ ನಿರ್ವಹಿಸುವ ಕೋಟ್ಟಯಂ ನಿವಾಸಿಯಾದ ೨೦ರ ಹರೆಯದ ಯುವತಿ ಮೇಲೆ ಲೈಂಗಿಕ ದೌರ್ಜನ್ಯವೆಸಗಲಾಗಿದೆ. ಪಡಿವಾಳದಲ್ಲಿ ವಾಸಿಸುವ ಬತ್ತೇರಿ ನಿವಾಸಿ ಹೈನಸ್ ಎಂಬಾತ ದೌರ್ಜನ್ಯವೆಸಗಿರುವುದಾಗಿ ಯುವತಿ ಆರೋಪಿಸಿದ್ದಾಳೆ. ಈ ತಿಂಗಳ 12ರಂದು ಯುವತಿ ವಾಸಿಸುವ ಸ್ಥಳಕ್ಕೆ ತಲುಪಿ ಹೈನಸ್ ದೌರ್ಜನ್ಯ ನಡೆಸಿದ್ದಾನೆನ್ನಲಾಗಿದೆ. ಅದರ ಮರುದಿನವೇ ಪೊಲೀಸ್ ಠಾಣೆಗೆ ತಲುಪಿ ಯುವತಿ ದೂರು ನೀಡಿದರೂ ಪೊಲೀಸರು ಅದನ್ನು ಸ್ವೀಕರಿಸಿಲ್ಲ. ಇದರಿಂದ ಯುವತಿ ಡಿಸಿಪಿಗೆ ದೂರು ನೀಡದ ಬಳಿಕ ಪೊಲೀಸರು ಕೇಸು ದಾಖಲಿಸಿದ್ದಾರೆಂದು ಯುವತಿ ತಿಳಿಸಿದ್ದಾಳೆ. ಇದೇ ವೇಳೆದೂರು ಹಿಂತೆಗೆಯದಿದ್ದಲ್ಲಿ ಕೊಲೆಗೈಯ್ಯುವು ದಾಗಿ ಆರೋಪಿ ಬೆದರಿಕೆಯೊಡ್ಡಿ ರುವುದಾಗಿಯೂ, ಅನಂತರ ವಾಸ ಸ್ಥಳಕ್ಕೆ ತಲುಪಿ ಆತ ಹಲ್ಲೆ ನಡೆಸಿದ್ದಾ ನೆಂದು ಯುವತಿ ಆರೋಪಿಸಿದ್ದಾಳೆ.
ಇದೇ ವೇಳೆ ದೌರ್ಜನ್ಯ ನಡೆದ ಆರು ದಿನಗಳ ಬಳಿಕವೇ ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ವೈದ್ಯಕೀಯ ತಪಾಸಣೆಗೆ ಒತ್ತಾಯಿಸಿದರೂ ಅದಕ್ಕೆ ಪೊಲೀಸರು ಸಿದ್ಧವಾಗಲಿಲ್ಲ. ಪ್ರಕರಣವನ್ನು ಮಾತುಕತೆ ಮೂಲಕ ಇತ್ಯರ್ಥ ನಡೆಸುವಂತೆ ಪೊಲೀಸರು ತನ್ನ ಮೇಲೆ ಒತ್ತಡ ಹೇರಿರುವು ದಾಗಿಯೂ ಯುವತಿ ಆರೋ ಪಿಸಿದ್ದಾಳೆ.






