ಪೆರ್ಣೆ ಶ್ರೀ ಮುಚ್ಚಿಲೋಟು ಭಗವತಿ ಕ್ಷೇತ್ರ ಕಳಿಯಾಟ ಮಹೋತ್ಸವ ಮಾ.೧ರಿಂದ
ಸೀತಾಂಗೋಳಿ: ಪೆರ್ಣೆ ಶ್ರೀ ಮುಚ್ಚಿಲೋಟು ಭಗವತಿ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ ಮಾರ್ಚ್ ೧ರಿಂದ ೭ರವರೆಗೆ ವಿವಿಧ ಕಾರ್ಯ ಕ್ರಮಗಳೊಂದಿಗೆ ನಡೆಯಲಿದೆ. ಕೇರಳದ ಪ್ರಧಾನ ೧೮ ಮುಚ್ಚಿ ಲೋಟ್ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಪೆರ್ಣೆ ಮುಚ್ಚಿಲೋಟ್ ಭಗವತೀ ಕ್ಷೇತ್ರದಲ್ಲಿ ೨೦೨೦ರ ಮಾರ್ಚ್ನಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆದಿದೆ. ಈ ವೇಳೆ ನಡೆಸಲು ಉದ್ದೇಶಿಸಿದ್ದ ಕಳಿಯಾಟ ಮಹೋತ್ಸವ ಮಾರ್ಚ್ ೧ರಿಂದ ನಡೆಸಲಾಗುತ್ತಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಮಾಡಲಾ ಗಿದೆ. ಈ ಮೊದಲು ೨೦೦೪ರಲ್ಲಿ ಇಲ್ಲಿ ಕಳಿಯಾಟ ಮಹೋತ್ಸವ ನಡೆದಿದೆ.
ಮಾ.೧ರಂದು ಬೆಳಿಗ್ಗೆ ೯.೩೦ರಿಂದ ಶ್ರೀ ಅನಂತಪುರ ಅನಂತಪದ್ಮನಾಭ ಸ್ವಾಮಿ ದೇವಸ್ಥಾನ ಸನ್ನಿಧಿಯಿಂದ ಭಂಡಾರ ಆಗಮನ, ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ೧೧ರಿಂದ ಕೊಡಿಎಲೆ ಇಡುವುದು, ಉಗ್ರಾಣ ತುಂಬಿಸುವುದು, ಮಧ್ಯಾಹ್ನ ೧೨.೩೦ರಿಂದ ತಂಬುರಾಟಿಯ ಮಧ್ಯಾಹ್ನ ಸ್ತೋತ್ರ, ಅಪರಾಹ್ನ ೩ರಿಂದ ಪುಲ್ಲೂರ್ ಕಣ್ಣನ್ ದೈವದ ವೆಳ್ಳಾಟ, ರಾತ್ರಿ ೮ಕ್ಕೆ ಕಣ್ಣಂಗಾಟ್ ಭಗವತಿ, ಪುಲ್ಲೂರ್ ಕಾಳಿ ದೈವಗಳ ಸ್ತೋತ್ರ, ೨ರಂದು ಪುಲ್ಲೂರ್ ಕಣ್ಣನ್ ದೈವ, ಕಣ್ಣಂಗಾಟ್ ಭಗವತಿ, ಪುಲ್ಲೂರು ಕಾಳಿ ದೈವಗಳ ನರ್ತನ, ಸಂಜೆ ೪.೩೦ರಿಂದ ಕುತ್ಯಾಳ ತರವಾಡಿನಿಂದ ಬೀರ್ಣಾಳ್ವ ದೈವದ ಭಂಡಾರ ಆಗಮನ, ೫ರಿಂದ ವಿವಿಧ ದೈವಗಳು, ೩ರಂದು ಬೆಳಿಗ್ಗೆ ೯.೩೦ರಿಂದ ಪುಲ್ಲೂರ್ ಕಣ್ಣನ್ ದೈವ ಅನಂತಪುರ ದೇವಸ್ಥಾನಕ್ಕೆ ಭೇಟಿ, ಬಳಿಕ ವಿವಿಧ ದೈವನರ್ತನ, ಅಪರಾಹ್ನ ೩ಕ್ಕೆ ಶ್ರೀ ವಿಷ್ಣುಮೂರ್ತಿ ದೈವ ಮಾಯಿಪ್ಪಾಡಿ ಅರಮನೆಗೆ ಭೇಟಿ, ಬಳಿಕ ವಿವಿಧ ದೈವಗಳ ನರ್ತನ, ೪ರಂದು ಬೆಳಿಗ್ಗೆ ೯.೩೦ರಿಂದ ಪುಲ್ಲೂರ್ ಕಣ್ಣನ್ ದೈವ ಮಾಯಿಪ್ಪಾಡಿ ಅರಮನೆಗೆ ಭೇಟಿ, ಬಳಿಕ ಕಣ್ಣಂಗಾಟ್ ಭಗವತಿ ದೈವ ಸಹಿತ ವಿವಿಧ ದೈವನರ್ತನ, ಅಪರಾಹ್ನ ೨ರಿಂದ ವೇಟಕ್ಕೊರುಮಗನ್ ದೈವನರ್ತನ, ಬಳಿಕ ವಿವಿಧ ದೈವ ನರ್ತನ, ೫ರಂದು ಬೆಳಿಗ್ಗೆ ೯.೩೦ರಿಂದ ವಿವಿಧ ದೈವಗಳ ನರ್ತನ, ೬ರಂದು ಬೆಳಿಗ್ಗೆ ೯ಕ್ಕೆ ಪುಲ್ಲೂರ್ ಕಣ್ಣನ್ ದೈವ ನರ್ತನದೊಂದಿಗೆ ವಿವಿಧ ದೈವಗಳ ನರ್ತನ, ೧೧ರಿಂದ ಮೇಲೇರಿಗೆ ಕೊಳ್ಳಿ ತರುವುದು, ಅಗ್ನಿಸ್ಪರ್ಶ, ೭ರಂದು ಮುಂಜಾನೆ ೪ರಿಂದ ನರಂಬಿಲ್ ಭಗವತಿ ದೈವದ ನರ್ತನ, ೯ರಿಂದ ಪುಲ್ಲೂರ್ ಕಾಳಿ ದೈವದ ನರ್ತನ, ತೀಪಾತಿ ದೈವದ ನರ್ತನ, ಅಗ್ನಿಸೇವೆ, ಶ್ರೀ ಮುಚ್ಚಿಲೋಟ್ ಭಗವತಿ ಅಮ್ಮನ ಸಿರಿಮುಡಿ ದರ್ಶನ ನಡೆಯಲಿದೆ. ಕ್ಷೇತ್ರದಲ್ಲಿ ಸಮಾಜ ಬಾಂಧವರ ಸಾಮೂಹಿಕ ವಿವಾಹ ಮಾರ್ಚ್ ೧೨ರಂದು ನಡೆಯಲಿದೆ. ಉತ್ಸವ ದಿನಗಳಲ್ಲಿ ಮಧ್ಯಾಹ್ನ ಹಾಗೂ ರಾತ್ರಿ ಅನ್ನ ಸಂತರ್ಪಣೆ ನಡೆಯಲಿದೆ.