ರೈಲಿನಿಂದ ಬಿದ್ದು ಅದೃಷ್ಟವಶಾತ್ ಪಾರಾದ ಯುವಕ

ಕಾಸರಗೋಡು: ರೈಲಿನಲ್ಲಿ ಸಂಚರಿಸುತ್ತಿದ್ದ ವೇಳೆ ಹೊರಕ್ಕೆಸೆಯಲ್ಪಟ್ಟು ಅದೃಷ್ಟವಶಾತ್ ಭಾರೀ ಸಂಭಾವ್ಯ ಅಪಾಯದಿಂದ ಪಾರಾದ ಘಟನೆ ನಡೆದಿದೆ. ಕೊಲ್ಲಂ ಕೊಯಿಳ್ಳಾ ನಿವಾಸಿ ಡಿಜೋ ಫೆರ್ನಾಂಡಿಸ್ ಅಪಾಯದಿಂದ ಪಾರಾದ ಯುವಕ. ಇಂದು ಮುಂಜಾನೆ ಉದಿನೂರಿನ   ಪೊದೆಯಲ್ಲಿ ಯುವಕ ಬಿದ್ದು ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಆತನ ಕೈ, ಕಾಲಿಗೆ ಗಾಯವುಂಟಾಗಿದೆ. ಆತನನ್ನು ಬಳಿಕ  ಪರಿಯಾರಂ ವೈದ್ಯಕೀಯ ಕಾಲೇಜಿಗೆ ಸಾಗಿಸಲಾಗಿದೆ. ನಿನ್ನೆ ಸಂಜೆ ೭ ಗಂಟೆಗೆ ಈತ ಮಾವೇಲಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಂಚರಿಸುತ್ತಿದ್ದ ವೇಳೆ ದಿಢೀರ್ ಆಗಿ ಚೆರ್ವತ್ತೂರು-ಪಯ್ಯನ್ನೂರು ಮಧ್ಯೆ ರೈಲಿನಿಂದ ಹೊರಕ್ಕೆಸೆಯಲ್ಪಟ್ಟಿದ್ದನು. ಅದನ್ನು ಕಂಡ ಆತನ ಜೊತೆಗಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಪೊಲೀಸರು ನಡೆಸಿದ ತಪಾಸಣೆಯಲ್ಲಿ ಡಿಜೋನನ್ನು  ಉದಿನೂರು ಬಳಿಯ ಪೊದೆಯಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಹಚ್ಚಿ ಆಸ್ಪತ್ರೆಗೆ ಸಾಗಿಸಿದ್ದಾರೆ.

You cannot copy contents of this page