ಕಾರಿನಲ್ಲಿ ಮಾದಕವಸ್ತು ಸಹಿತ  ಸಂಚರಿಸುತ್ತಿದ್ದ ಮೂವರ ಬಂಧನ

ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ ಎಂಡಿಎಂಎ ಸಹಿತ ಮೂವರನ್ನು  ಬಂಧಿಸಲಾಗಿದೆ. ಪಟ್ಲ ನಿವಾಸಿ  ಅಬ್ದುಲ್ ರೌಫ್, ಕರ್ನಾಟಕದ  ಸುಳ್ಯ ಕೋಣಡ್ಕಪದವು ನಿವಾಸಿ ಕೌಶಿಕ್, ಅಡೂರು ಪೇರಾಮರವ ನಿವಾಸಿ ಮುಹಮ್ಮದ್ ಜಸೀರ್ ಯು.ಕೆ ಎಂಬಿವರನ್ನು ಕಾಸರಗೋಡು ಎಕ್ಸೈಸ್ ರೇಂಜ್ ಆಫೀಸರ್ ಅಶ್ವಿನ್ ಟಿ.ಕೆ ನೇತೃತ್ವದ ತಂಡ ಬಂಧಿಸಿದೆ. ಆರೋಪಿಗಳ ಕೈಯಿಂದ  1.899 ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ.  ಈ ಸಂಬಂಧ  ಎನ್‌ಡಿಪಿಎಸ್ ಪ್ರಕರಣ ದಾಖಲಿಸಲಾಗಿದೆ. ನಿನ್ನೆ ರಾತ್ರಿ 7.10ರ ವೇಳೆ ಚೆಂಗಳ ಸಂತೋಷ್‌ನಗರದಲ್ಲಿ ಆರೋಪಿಗಳು ಸಂಚರಿಸುತ್ತಿದ್ದ ಮಾರುತಿ ಆಲ್ಟೋ ಕಾರನ್ನು  ತಡೆದು ನಿಲ್ಲಿಸಿ ತಪಾಸಣೆ ನಡೆಸುತ್ತಿದ್ದಾಗ ಮಾದಕವಸ್ತು ಪತ್ತೆಯಾಗಿದೆ. ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ  ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಅನೀಶ್ ಕುಮಾರ್ ಎಂ, ಪ್ರಿವೆಂಟೀವ್ ಆಫೀಸರ್ (ಗ್ರೇಡ್) ಅಭಿಲಾಷ್ ಕೆ, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ  ಅಬ್ದುಲ್ ಅಸೀಸ್, ಲಿಜಿನ್ ಆರ್, ಶಂಸುದ್ದೀನ್ ವಿ.ಟಿ, ಅಶ್ವಿನ್ ಎನ್.ವಿ ಎಂಬಿವರಿದ್ದರು.

You cannot copy contents of this page