ಕುಂಬಳೆ: ೧೬ರ ಹರೆಯದ ಬಾಲಕಿಗೆ ಫೋನ್ನಲ್ಲಿ ಸಂದೇಶಗಳನ್ನು ಕಳುಹಿಸಿ, ಅನಂತರ ಆಕೆಯನ್ನು ಹಿಂಬಾಲಿಸಿ ಕಿರುಕುಳ ನೀಡಲೆತ್ನಿಸಿದ ಬಗ್ಗೆ ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿದೆ. ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಬಾಲಕಿ ನೀಡಿದ ದೂರಿನಂತೆ ಕೊಡ್ಯಮ್ಮೆಯ ಖಲಂದರ್ ಶಾನಿ (26) ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ಬಾಲಕಿಯ ಫೋನ್ನಂಬ್ರವನ್ನು ಎಲ್ಲಿಂದಲೋ ಸಂಗ್ರಹಿಸಿದ ಆರೋಪಿ ಬಳಿಕ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡತೊಡಗಿದ್ದಾನೆನ್ನ ಲಾಗಿದೆ. ಆದರೆ ಬಾಲಕಿ ಸಂದೇಶ ಗಳಿಗೆ ಪ್ರತಿಕ್ರಿಯಿಸಲಿಲ್ಲ. ಇದರಿಂದ ಆರೋಪಿ ಆಕೆಯನ್ನು ಹಿಂಬಾಲಿಸಿ ಉಪಟಳ ನೀಡಲು ಆರಂಭಿಸಿದ್ದನು. ಈ ಬಗ್ಗೆ ಬಾಲಕಿ ಮನೆಯವರಲ್ಲಿ ತಿಳಿಸಿದ್ದು ಅನಂತರ ಪೊಲೀಸರಿಗೆ ದೂರು ನೀಡಲಾಗಿದೆ. ಖಲಂದರ್ ಶಾನಿಯನ್ನು ಪತ್ತೆಹಚ್ಚಲು ಪೊಲೀಸರು ಶೋಧ ಆರಂಭಿಸಿದ್ದಾರೆ.






