ಬಂದಡ್ಕ: ಬೇತೂರುಪಾರದಲ್ಲಿ ಗೃಹಿಣಿ ಶೆಡ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ವಿ. ನಾರಾಯಣನ್ರ ಪತ್ನಿ ಎನ್. ಶೋಭಾ (50) ಮೃತಪಟ್ಟವರು. ನಿನ್ನೆ ಬೆಳಿಗ್ಗೆ ೬ ಗಂಟೆಗೆ ಮನೆ ಸಮೀಪದ ಶೆಡ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೂಡಲೇ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿದರೂ ಆ ವೇಳೆಗೆ ನಿಧನ ಸಂಭವಿಸಿತ್ತು. ಬೇಡಗಂ ಪೊಲೀಸರು ಮಹಜರು ನಡೆಸಿದರು. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಮನೆಗೆ ಕೊಂಡೊಯ್ದು ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಮೃತರು ಪತಿ, ಮಕ್ಕಳಾದ ಶೋಭಿತ, ನಿಖಿತ, ನಿಶಿತ, ಅಳಿಯ ದೀಪೇಶ್, ಸಹೋದರರಾದ ಬಾಲಕೃಷ್ಣನ್, ಉಣ್ಣಿಕೃಷ್ಣನ್, ಸಹೋದರಿಯರಾದ ಸುಶೀಲ, ಸರೋಜಿನಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.






