ಬಾಲಕಿಯನ್ನು ಹಿಂಬಾಲಿಸಿ ಕಿರುಕುಳ: ಯುವಕನ ವಿರುದ್ಧ ಇನ್ನೊಂದು ಕೇಸು

ಕುಂಬಳೆ: ಪ್ರಾಯಪೂರ್ತಿ ಯಾಗದ ಬಾಲಕಿಯನ್ನು ಹಿಂಬಾಲಿಸಿದ ಆರೋಪದಂತೆ  ಕೊಡ್ಯಮ್ಮೆಯ ಖಲಂದರ್ ಶಾನಿ (26) ಎಂಬಾತನ  ವಿರುದ್ಧ ಕುಂಬಳೆ ಪೊಲೀಸರು ಇನ್ನೊಂದು ಕೇಸು ದಾಖಲಿಸಿಕೊಂಡಿದ್ದಾರೆ. 16ರ ಹರೆಯದ ಬಾಲಕಿಯನ್ನು ಈತ ನಿರಂತರ ಹಿಂಬಾಲಿಸಿ ಕಿರುಕುಳ ನೀ ಡುತ್ತಿದ್ದನೆಂದು  ದೂರು ನೀಡಲಾಗಿತ್ತು

16ರ ಹರೆಯದ ಇನ್ನೋರ್ವೆ ಬಾಲಕಿಗೆ ಫೋನ್‌ನಲ್ಲಿ ಸಂದೇಶ ಗಳನ್ನು ಕಳುಹಿಸಿ ಅಲ್ಲದೆ ಆಕೆಯನ್ನು ಹಿಂಬಾಲಿಸಿ ಕಿರುಕುಳ ನೀಡಲೆತ್ನಿಸಿದ ಆರೋಪದಂತೆ ಖಲಂದರ್‌ಶಾನಿ ವಿರುದ್ಧ  ಈ ಮೊದಲು ಕೇಸು ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಆತನ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿರುವಾಗಲೇ ಆತನ  ವಿರುದ್ಧ ಇನ್ನೋರ್ವೆ ಬಾಲಕಿ ದೂರು ನೀಡಿದ್ದಾಳೆ.

You cannot copy contents of this page