ಬಿಜೆಪಿಯಿಂದ ಓಣಂ ಕಿಟ್ ವಿತರಣೆ

ನಾರಂಪಾಡಿ: ಬಿಜೆಪಿ ಬದಿಯಡ್ಕ ಮಂಡಲ ೫ನೇ ವಾರ್ಡ್ ನಾರಂಪಾಡಿ ಸಮಿತಿ ವತಿಯಿಂದ ೬೦ರಷ್ಟು ಕುಟುಂಬಗಳಿಗೆ ಓಣಂ ಕಿಟ್‌ಗಳನ್ನು ವಿತರಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಉದ್ಘಾಟಿಸಿದರು. ಓಣಂನಂತಹ ಆಚರಣೆ ಸಂದರ್ಭಗಳಲ್ಲಿ ಧರ್ಮ, ಸಮಾಜ, ರಾಷ್ಟ್ರೀಯ ಭಿನ್ನತೆಗಳನ್ನು ಮರೆತು ಒಂದಾಗಲಿರುವ ವೇದಿಕೆಗಳಾಗಬೇಕೆಂದು ಅವರು ಆಹ್ವಾನ ನೀಡಿದರು. ಬೂತ್ ಅಧ್ಯಕ್ಷ ಸತ್ಯಗೋಪಾಲ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ರಾಜ್ಯ ಕೌನ್ಸಿಲ್ ಸದಸ್ಯ ಹರೀಶ್ ನಾರಂಪಾಡಿ, ಬದಿಯಡ್ಕ ಮಂಡಲ ಅಧ್ಯಕ್ಷ ಎಂ. ಗೋಪಾಲಕೃಷ್ಣನ್ ಮಾತನಾಡಿದರು.

RELATED NEWS

You cannot copy contents of this page