ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಐದು ಹುಂಜಗಳ ವಶ, ಐವರ ಸೆರೆ

ಕುಂಬಳೆ: ಇಚ್ಲಂಗೋಡು ದೇವ ಸ್ಥಾನಕ್ಕೆ ಸಮೀಪ ಕೋಳಿ ಅಂಕ ನಡೆಯುತ್ತಿದ್ದ ಸ್ಥಳಕ್ಕೆ ಕುಂಬಳೆ ಠಾಣೆ ಎಸ್‌ಐ ಗಣೇಶನ್ ಕೆ.ಪಿ ನೇತೃತ್ವದ ಪೊಲೀಸರು ನಿನ್ನೆ ದಾಳಿ ನಡೆಸಿ ಐದು ಮಂದಿಯನ್ನು ಸೆರೆಹಿಡಿದು, ಐದು ಹುಂಜ ಕೋಳಿಗಳನ್ನು  ವಶಕ್ಕೆ ತೆಗೆದುಕೊಂಡಿದ್ದಾರೆ. ಮೀಯಪದವು ಬೇರಿಕೆ ನಿವಾಸಿ  ದೀಕ್ಷಿತ್ (25), ಮೊಗ್ರಾಲ್ ಪುತ್ತೂರು ಎಡಚ್ಚೇರಿಯ ಮಹೇಶ್ ಕೆ (40), ಜೋಡುಕಲ್ಲಿನ ಪ್ರಕಾಶ್ ಶೆಟ್ಟಿ (60), ಮೀಯಪದವು ಅಡ್ಕತ್ತಗುರಿಯ ಗಂಗಾಧರ ಮೂಲ್ಯ (63) ಮತ್ತು ಪೈವಳಿಕೆ ನಗರ ಮರಿಕದ ಐತ್ತಪ್ಪ (40) ಎಂಬವರನ್ನು ಪೊಲೀಸರು ಸೆರೆಹಿಡಿದಿದ್ದಾರೆ.  ಕೋಳಿ ಅಂಕದಲ್ಲಿ ಸುಮಾರು 80 ಮಂದಿ ಇದ್ದರೆಂದೂ  ಅವರೆಲ್ಲರೂ ಓಡಿ ಪರಾರಿಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page