ಕಾಸರಗೋಡು: ಯುವತಿ ನಾಪತ್ತೆಯಾದ ಬಗ್ಗೆ ಕಾಸರಗೋಡು ಪೊಲೀಸರಿಗೆ ದೂರು ನೀಡಲಾಗಿದೆ. ಕೂಡ್ಲು ಮೀಪುಗುರಿ ನಿವಾಸಿ ಸುನಿತ (42) ನಾಪತ್ತೆಯಾಗಿದ್ದು, ಆ ಬಗ್ಗೆ ಅವರ ಪತಿ ಪ್ರಜೀಶ್ ಪಿ. ದೂರು ನೀಡಿದ್ದಾರೆ. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಆಗಸ್ಟ್ 30ರಂದು 5 ಗಂಟೆಗೆ ಮನೆಯಿಂದ ಹೊರ ಹೋಗಿದ್ದ ಸುನಿತ ಬಳಿಕ ಮನೆಗೆ ಹಿಂತಿರುಗಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ.






